ಬoಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಮಂಚಿ ಸರಕಾರಿ ಶಾಲೆಯಲ್ಲಿ ಸ್ವಾತಂತ್ರ‍್ಯ ದಿನದಂದು ಧ್ವಜಾರೋಹಣದ ಸಂದರ್ಭ ಶಾಲಾ ಮಕ್ಕಳೊಂದಿಗೆ ಸರಕಾರಿ ಶಾಲಾ ಶಿಕ್ಷಕಿ ಸ್ವಾತಂತ್ರ್ಯ ಹೋರಾಟಗಾರರಿಗೆ ಘೋಷಣೆ ಹಾಕಿದ್ದಾರೆ .
ಈ ಪೈಕಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರಿಗೂ ಜೈಕಾರ ಹಾಕಿದ್ದಾರೆ. ಇದನ್ನು ಶಾಲಾ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳಲು ಬಂದಿದ್ದ ಬಶೀರ್ ಎಂಬಾತ ವಿಡಿಯೋ ಮಾಡಿ, ವೈರಲ್ ಮಾಡಿದ್ದಾನೆ.

ಇದನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ ಶಾಲಾ ಮುಸ್ಲಿಂ ಪೋಷಕರು ಕೆಲವು ರಾಜಕಾರಣಿಗಳು, ಶಿಕ್ಷಕಿಗೆ ಒತ್ತಡ ತಂದು, ಶಿಕ್ಷಕಿ ಕ್ಷಮೆಯಾಚಿಸುವಂತೆ ಮಾಡಿದ್ದಾರೆ.
ಈ ಪ್ರಕರಣವನ್ನು ಹಿಂದು ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲೆ ವಿಟ್ಲ ತಾಲೂಕು ತೀವ್ರವಾಗಿ ಖಂಡಿಸಿದ್ದು, ಸರಕಾರಿ ಶಾಲೆಯಲ್ಲಿ ಪೋಷಕರ ನೆಪವಾಗಿಟ್ಟುಕೊಂಡು ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಮತಾಂಧರನ್ನು ಕೂಡಲೇ ಬಂಧಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಹಿಂ.ಜಾ.ವೇ ಎಚ್ಚರಿಕೆಯನ್ನು ನೀಡಿದೆ.

ಇನ್ನೂ ಶಾಲೆಯಲ್ಲಿ ನಡೆದ ಕಾರ್ಯಕ್ರಮ ಚಿತ್ರೀಕರಣ ಮಾಡಿ ವೈರಲ್ ಮಾಡಿರುವುದನ್ನು ಆಕ್ಷೇಪಿಸಿ, ಮುಖ್ಯ ಶಿಕ್ಷಕರು ಬಶೀರ್ ವಿರುದ್ಧ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.



