ಜನ ಮನದ ನಾಡಿ ಮಿಡಿತ

Advertisement

7 ಮುದ್ದು ಪುಟಾಣಿ ಕಂದಮ್ಮಗಳಿಗೆ ರಾಕ್ಷಸಿಯಾದ ನರ್ಸ್..!

ನರ್ಸ್ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ನವಜಾತ ಶಿಶುಗಳ ಪಾಲಿಗೆ ನರರಾಕ್ಷಸಿಯಾಗಿದ್ದಾಳೆ. ಏನೂ ಅರಿಯದ 7 ಮುಗ್ಧ ಕಂದಮ್ಮಗಳನ್ನ ಕೊಂದು ಸೀರಿಯಲ್ ಕಿಲ್ಲರ್ ಹಣೆಪಟ್ಟಿ ಕಟ್ಟಿಕೊಂಡಿದ್ದಾಳೆ.

ಈ ಮಕ್ಕಳ ಸೀರಿಯಲ್ ಕಿಲ್ಲರ್‌ಗೆ ಭಾರತ ಮೂಲದ ಸಿಬ್ಬಂದಿಯೂ ಒಬ್ಬರು ಸಾಥ್ ನೀಡಿರೋದು ಶಾಕ್ ಉಂಟುಮಾಡಿದೆ. ಇoಗ್ಲೆoಡ್‌ನ ಆಸ್ಪತ್ರೆಯೊಂದರ ಹೆರಿಗೆ ವಾರ್ಡ್ನಲ್ಲಿ ಈ ಲೂಸಿ ಲೆಟ್ಟಿ ಕಾರ್ಯ ನಿರ್ವಹಿಸುತ್ತಿದ್ದಳು. ಈ ವೇಳೆ ಹಲವು ಗರ್ಭಿಣಿಯರಿಗೆ ಹೆರಿಗೆ ಮಾಡಿಸುವ ಕೆಲಸವನ್ನು ಈ ಲೂಸಿ ಮಾಡುತ್ತಿದ್ದಳು. ಆದರೆ ಆ ಮೇಲೆ ಈಕೆಗೆ ಅದೇನಾಗ್ತಿತ್ತೋ ಗೊತ್ತಿಲ್ಲ. ಬಾಣಂತಿಯರು ಮಗುವನ್ನು ಬಿಟ್ಟು ಶೌಚಾಲಯಕ್ಕೆ ಹೋದಾಗ ಯಾರಿಗೂ ತಿಳಿಯಂದoತೆ ಕೊಲೆ ಮಾಡುತ್ತಿದ್ದಳು. ಹೀಗೆ ಈ ಲೂಸಿ ಲೆಟ್ಟಿ ಒಂದಲ್ಲ ಎರಡಲ್ಲ ಬರೋಬ್ಬರಿ 7 ನವಜಾತ ಶಿಶುಗಳನ್ನ ಹತ್ಯೆಮಾಡಿದ್ದಳು. ಸಿರಿಯಲ್ ಮಕ್ಕಳ ಕಿಲ್ಲರ್ ಆಗಿ ಎಲ್ಲರಿಗೂ ಶಾಕ್ ನೀಡಿದ್ದಾಳೆ. ಬಾಳಿ ಬದುಕಬೇಕಿದ್ದ 7 ಮಕ್ಕಳ ಜೀವವನ್ನು ಕಿತ್ತುಕೊಂಡ ಲೂಸಿ ಲೆಟ್ಟಿ ಎಂಬ ರಾಕ್ಷಸಿಗೆ ಲಂಡನ್‌ನ ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ. ಕೋರ್ಟ್ ಈ ಬಗ್ಗೆ ತೀರ್ಪು ಪ್ರಕಟಿಸುತ್ತಿದ್ದಂತೆ ಇಂಗ್ಲೆoಡ್ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.. ಅಲ್ಲದೇ ಪೊಲೀಸರ ವಿಚಾರಣೆ ವೇಳೆ ಲೂಸಿ ಇನ್ನೂ ಹಲವರ ಹತ್ಯೆಗೆ ಪ್ರಯತ್ನಿಸಿದ್ದಾಗಿ ಬಾಯ್ಬಿಟ್ಟಿದ್ದಾಳೆ. ಮಾತ್ರವಲ್ಲದೇ ಈಕೆ ಇನ್ನೂ 6 ಮಕ್ಕಳ ಹತ್ಯೆಗೆ ಸಂಚು ರೂಪಿಸಿದ್ದು ಪೋಷಕರನ್ನ ಬೆಚ್ಚಿ ಬೀಳುವಂತೆ ಮಾಡಿದೆ.ಒಟ್ಟಿನಲ್ಲಿ ನವಜಾತ ಶಿಶುಗಳ ಪಾಲಿಗೆ ಎರಡನೇ ತಾಯಾಗಿ ಆಸ್ಪತ್ರೆ ವಾರ್ಡ್ನಲ್ಲಿ ಮಮತೆ ನೀಡಬೇಕಿದ್ದ ಓರ್ವ ನರ್ಸ್ ನಡೆಸಿರೋ ಕೃತ್ಯ 7 ತಾಯಂದಿರ ಕಣ್ಣೀರಿಗೆ ಕಾರಣವಾಗಿದೆ. ಈ ಘಟನೆ ಬಳಿಕ ಯಾರನ್ನ ನಂಬಬೇಕು ಯಾರನ್ನ ನಂಬಬಾರದು ಅನ್ನೋ ಯಕ್ಷ ಪ್ರಶ್ನೆಯಾಗಿದೆ.

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

error: Content is protected !!