ವಿಟ್ಲದ ಕುಖ್ಯಾತ ಕ್ರಿಮಿನಲ್ ಸಾಧಿಕ್‌ನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಕ್ರಿಮಿನಲ್ ಸಾಧಿಕ್‌ನಿಂದ ಸಿಸಿಬಿ ತಂಡ 50 ಗ್ರಾಂ ತೂಕದ 2,50,000 ರೂ. ಮೌಲ್ಯದ ಎಂಡಿಎoಎ ಮಾದಕ ವಸ್ತು, ಕಾರು, ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪನ ಸಹಿತ 3,60,500 ರೂ.. ಮೌಲ್ಯದ ಸೊತ್ತು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಾದಿಕ್ ವಿರುದ್ಧ ಈ ಹಿಂದೆ ವಿಟ್ಲ ಪೊಲೀಸ್ ಠಾಣೆಯಲ್ಲಿ 5 ಹಲ್ಲೆ ಬೆದರಿಕೆ ಪ್ರಕರಣಗಳು, 4 ಕೊಲೆಯತ್ನ, ಪ್ರಕರಣಗಳು, ಪುತ್ತೂರು ನಗರ ಠಾಣೆಯಲ್ಲಿ 2 ಕೊಲೆಯತ್ನ ಪ್ರಕರಣಗಳು, ಉಪ್ಪಿನಂಗoಡಿ ಠಾಣೆಯಲ್ಲಿ ಮಾನಭಂಗ ಮತ್ತು ಅಪಹರಣ ಪ್ರಕರಣ, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಹಲ್ಲೆ, ಪ್ರಕರಣ, ಮಂಗಳೂರು ಕಾವೂರು ಠಾಣೆಯಲ್ಲಿ ದರೋಡೆ ಪ್ರಕರಣ, ಬೆಂಗಳೂರು ಹೆಬ್ಬಾಳ ಠಾಣೆಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ ಸೇರಿದಂತೆ ಈತನ ವಿರುದ್ಧ ಈವರೆಗೆ 17 ಪ್ರಕರಣಗಳು ದಾಖಲಾಗಿವೆ.ನಗರ ಹಾಗೂ ಕೇರಳದ ವಿವಿಧೆಡೆ ಕಾರಿನಲ್ಲಿ ಮಾದಕ ವಸ್ತು ಎಂಡಿಎoಎಯನ್ನಿಟ್ಟುಕೊoಡು ಮಾರಾಟ ಮಾಡುತ್ತಿದ್ದ ಆರೋಪಿ ವಿಟ್ಲದ ವಸತಿ ಸಮುಚ್ಚಯದಲ್ಲಿ ವಾಸವಾಗಿದ್ದ ಹಸನ್ ಸಾದಿಕ್ ಯಾನೆ ಬ್ಲೇಡ್ ಸಾಧಿಕ್ ಬಂಧನವಾಗಿದೆ. ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಪಿ.ಎ. ಹಗಡ, ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಹೆಚ್.ಎಂ, ಎಸ್ಟ್ ಗಳಾದ ರಾಜೇಂದ್ರ ಬಿ ನರೇಂದ್ರ ಶರಣಪ್ಪ ಭಂಡಾರಿ ಸುದೀಪ್ ಎಂ.ವಿ.ಮತ್ತು ಬಿ ತಂಡ ಭಾಗವಹಿಸಿದ್ದು ಈತನ ಸಹಚರರಿಗಾಗಿ ತೀವ್ರ ಶೋಧ ಮುಂದುವರಿದಿದೆ.



