ಬಿ.ಸಿ.ರೋಡಿನ ಕೆಎಸ್‌ಆರ್‌ಟಿಸಿ ಡಿಪ್ಪೋದ ಮುಂಭಾಗದಲ್ಲಿರುವ ರ‍್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ (ಕೆಎಫ್‌ಸಿಎಸ್‌ಸಿ)ದ ಗೋದಾಮಿನಲ್ಲಿದ್ದ ಪಡಿತರ ಅಕ್ಕಿ ದಾಸ್ತಾನಿನಲ್ಲಿ 1.32 ಕೋ.ರೂ.ಗಳ 3,892.95 ಕ್ವಿಂಟಾಲ್ ಅಕ್ಕಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದoತೆ ಉನ್ನತ ಮಟ್ಟದ ಅಧಿಕಾರಿಗಳಿಂದಲೇ ತನಿಖೆ ನಡೆಯಬೇಕಿರುವುದರಿಂದ ಶೀಘ್ರ ಕೆಎಫ್‌ಸಿಎಸ್‌ಸಿಯ ಕೇಂದ್ರ ಕಚೇರಿಯ ಅಧಿಕಾರಿ ಬಂಟ್ವಾಳಕ್ಕೆ ಆಗಮಿಸುವ ಸಾಧ್ಯತೆ ಇದೆ.

ಅವ್ಯವಹಾರ ಪ್ರಕರಣದಲ್ಲಿ ಹೆಚ್ಚಿನ ಪ್ರಮಾಣದ ಅಕ್ಕಿಯ ಕೊರತೆ ಇರುವುದರಿಂದ ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ್ದನು. ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಕೂಡ ಕೇಂದ್ರ ಕಚೇರಿಯ ಅಧಿಕಾರಿಗಳಿಂದಲೇ ತನಿಖೆ ನಡೆಯಬೇಕು ಎಂದು ಹೇಳಿದ್ದಾರೆ. ಹೀಗಾಗಿ ಆ. 20 ಅಥವಾ 21ಕ್ಕೆ ಅಧಿಕಾರಿಗಳು ಗೋದಾಮಿಗೆ ಭೇಟಿ ನೀಡಲಿದ್ದಾರೆ.



