ದಕ್ಷಿಣ ಕನ್ನಡ: ವಿದ್ಯಾಭಾರತಿ ಸಹಯೋಗದಲ್ಲಿ ಬೀದರ್ ನಲ್ಲಿ ನಡೆದ 19 ವರ್ಷದ ಒಳಗಿನ ಬಾಲಕರ ರಾಜ್ಯಮಟ್ಟದ ವಾಲೀಬಾಲ್ ಪಂದ್ಯಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ, ವಚನ್ ಆರ್. ಎಸ್. ಗೌಡ ಹಾಗೂ ಷಷ್ಠಿಶ್ ಪಿ. ಶೆಟ್ಟಿ ಗೌರಿಕೋಡಿ ಒಳಗೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ತಂಡವು, ಪ್ರಥಮ ಸ್ಥಾನವನ್ನು ಪಡೆದು, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ. ಇವರು, ಮಂಗಳೂರಿನ ಶಾರದಾ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳಾಗಿದ್ದಾರೆ.






