ಮುಲ್ಕಿ: ಶಿಮಂತೂರು ಗ್ರಾಮದ ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಭಾವಂತ ಸಾಧಕ ವಿದ್ಯಾರ್ಥಿಗಳಿಗೆ ದಾನಿಗಳಾದ ಮುಂಬೈ ಉದ್ಯಮಿ ಶಿಮಂತೂರು ನಡಿಗುತ್ತು ಡಾ. ಪದ್ಮನಾಭ ವಿ. ಶೆಟ್ಟಿ ಯವರಿಂದ ನೀಡಲ್ಪಟ್ಟ ಗೌರವ ಧನವನ್ನು ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಎನ್ ಶೆಟ್ಟಿ ಕ್ಷೇತ್ರದಲ್ಲಿ ನೀಡಿ ಗೌರವಿಸಿದರು.

ಈ ಸಂದರ್ಭ ಕ್ಷೇತ್ರದ ಅರ್ಚಕ ಪುರುಷೋತ್ತಮ ಭಟ್, ಅತಿಕಾರಿಬೆಟ್ಟು ಗ್ರಾ.ಪಂ.ಅಧ್ಯಕ್ಷ ಮನೋಹರ ಕೋಟ್ಯಾನ್, ಸದಸ್ಯೆ ಪದ್ಮಿನಿ ವಿಜಯ ಶೆಟ್ಟಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ದಿನೇಶ್ಚಂದ್ರ ಅಜಿಲ, ಚಂದ್ರಹಾಸ ಸುವರ್ಣ ಹರೀಶ್ ಶೆಟ್ಟಿ, ವಿಶ್ವನಾಥ ಶೆಟ್ಟಿ, ಶಶಿಕಲಾ, ಕಲ್ಪನಾ ಬಲ್ಲಾಳ್,ಉದ್ಯಮಿ ಜಯಕರ ಶೆಟ್ಟಿ ಮುಂಬೈ, ರಾಘು ಶೆಟ್ಟಿ ಲಾಯಿದೆ ಮನೆ, ಭುಜಂಗಶೆಟ್ಟಿ ಪರೆಂಕಿಲ, ದೇವಸ್ಥಾನದ ಪ್ರಬಂಧಕ ಕಿಶೋರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.



