ಸರಪಾಡಿ ಶ್ರೀಶರಭೇಶ್ವರ ದೇವಸ್ಥಾನದಲ್ಲಿ ಕೊಡಿಮರ ಸ್ವೀಕಾರ ಸಮಾರಂಭ ನಡೆದಿದ್ದು, ಪುರೋಹಿತರ ನೇತೃತ್ವದಲ್ಲಿ ಕೊಡಿಮರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ದೇವಾಲಯದ ನೂತನ ವೆಬ್‌ಸೈಟ್‌ನ್ನು ಕನ್ಯಾನ ಸದಾಶಿವ ಶೆಟ್ಟಿವರು ಅನಾವರಣಗೊಳಿಸಿದ್ದಾರೆ. ಇನ್ನೂ ಈ ಸಭೆಯಲ್ಲಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿಯವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಬಳಿಕ ಅಡ್ಯಾಲು ಅಜಿಲಮೊಗರು ಯಕ್ಷ ಗುರು ಕಲಾತಂಡದಿoದ ‘ಶ್ರೀಕೃಷ್ಣ ಲೀಲೆ’ ಯಕ್ಷಗಾನ ಪ್ರದರ್ಶನಗೊಂಡಿದೆ.









