ಮೂಡುಬಿದಿರೆ: ಕಾಡಿನ ಹೂವುಗಳಂತೆ ಸಾಮಾಜಿಕ, ಆರ್ಥಿಕ ಚೈತನ್ಯವಿಲ್ಲದೇ ಬಾಡಿ ಹೋಗಬೇಕಾದ ಕರ್ಣ, ಏಕಲವ್ಯರಂತಹ ಪ್ರತಿಭೆಗಳನ್ನೂ ಪೋಷಿಸಿ ರಾಷ್ಟ್ರ ಮಾನ್ಯತೆ ದೊರಕಿಸಿದ ಶಿಕ್ಷಕರ ಸಾಲಿನಲ್ಲಿ ತಮ್ಮ ಶಿಕ್ಷಕ, ಬಂಗಬೆಟ್ಟು ಗುತ್ತು ಶತಾಯುಷಿ ಸೀತಾರಾಮ ಶೆಟ್ಟಿಯವರು ಗಮನಾರ್ಹರು. ಶಿಸ್ತು, ಸಂಯಮ,ಸದೃಡ ಮನೋಭಾವ, ಬದ್ಧತೆ, ಆತ್ಮ ಸ್ತೈರ್ಯ ಮೊದಲಾದ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿ ಶಿಲೆಯನ್ನು ಶಿಲ್ಪವಾಗಿಸುವಲ್ಲಿ ಅವರ ಪಾತ್ರ ಮಹತ್ವದ್ದು ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಹೇಳಿದರು. ಅವರು ರವಿವಾರ ಸಮಾಜ ಮಂದಿರದಲ್ಲಿ ವಿದ್ಯಾರ್ಥಿಗಳು ಮತ್ತು ಅಭಿಮಾನಿಬಳಗ ಹಾಗೂ ಸಮಾಜ ಮಂದಿರ ಸಭಾ (ರಿ.) ವತಿಯಿಂದ ಜರಗಿದ ಸೀತಾರಾಮ ಶೆಟ್ಟಿ ಅವರ ಶತ ಸಂಭ್ರಮ ಆಚರಣೆಯಲ್ಲಿ ಅಭಿನಂದನಾ ಮಾತುಗಳನ್ನಾಡಿದರು.
ಗುರುವನ್ನು ಗೌರವಿಸದವರನ್ನು ಸಮಾಜವೂ ಗುರುತಿಸುವುದಿಲ್ಲ . ಈ ನಿಟ್ಟಿನಲ್ಲಿ ಶಿಕ್ಷಣ, ಜ್ಞಾನಕ್ಕಿಂತ ಸಂತೃಪ್ತಿಯ ಬದುಕು ಕಟ್ಟಿಕೊಳ್ಳುವ ವಿವೇಕ, ಕೀರ್ತಿಗಿಂತ ಬತ್ತದ ಒರತೆಯಂತೆ ನೀಡಿದ ಸ್ಫೂರ್ತಿ ತಮ್ಮೆಲ್ಲರ ಬದುಕನ್ನು ಬೆಳಗಿಸಿದೆ ಎಂದವರು ಹೇಳಿದರು.
ಶತಾಯುಷಿ ಸೀತಾರಾಮ ಶೆಟ್ಟಿಯವರ ಶತ ಸಂಭ್ರಮಕ್ಕೆ ಅವರ ವಿದ್ಯಾರ್ಥಿಗಳು, ಅಭಿಮಾನಿಗಳು ಉತ್ಸಾಹದಿಂದ ಸೇರಿದರು. ತುಂಬಿ ತುಳುಕಿದ ಸಮಾಜ ಮಂದಿರದ ಆವರಣ ಅವರೆಲ್ಲರ ಉತ್ಸಾಹ, ಉತ್ಸವಕ್ಕೆ ಸಾಕ್ಷಿಯಾಯಿತು. ಸಭಾ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಗುರುವಂದನೆಗೆ ಮುಗಿಬಿದ್ದ ವಿದ್ಯಾರ್ಥಿಗಳು,ಸಂಘ ಸಂಸ್ಥೆಗಳ ಪ್ರಮುಖರು, ಹಿತೈಶಿಗಳು ಸಾಲುಗಟ್ಟಿ ನಿಂತು ಗುರುವಂದನೆ ಸಲ್ಲಿಸಿದರು. ಸಹಭೋಜನ, ಆತಿಥ್ಯದ ಜತೆಗೆ ಯಕ್ಷವೈಭವ ಸಾಂಸ್ಕೃತಿಕ ಕಾರ್ಯಕ್ರಮವೂ ಶತ ಸಂಭ್ರಮಕ್ಕೆ ರಂಗೇರಿಸಿತ್ತು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…