ಮೂಡುಬಿದಿರೆ: ಕಳೆದ ಆರು ವರ್ಷಗಳ ಹಿಂದೆ ಆರಂಭಗೊoಡಿರುವ ‘ಹ್ಯುಮಾನಿಟಿ ಟ್ರಸ್ಟ್’ (ರಿ) ಬೆಳ್ಮಣ್ ಇದರ 1000ನೇ ಪ್ರಾಜೆಕ್ಟ್ ‘ಉಚಿತ ವಸತಿ ಯೋಜನೆ”ಯ 20 ಬಾಡಿಗೆ ರಹಿತ ಮನೆಗಳು ಆ.27ರಂದು ಪಡುಮಾರ್ನಾಡಿನಲ್ಲಿ ಉದ್ಘಾಟನೆಗೊಳ್ಳಲಿವೆ ಎಂದು ಹ್ಯುಮಾನಿಟಿ ಟ್ರಸ್ಟ್ ನ ಅಧ್ಯಕ್ಷ ರೋಶನ್ ಬೆಳ್ಮಣ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡಿನಲ್ಲಿ ದಾನ ರೂಪದಲ್ಲಿ ದೊರೆತ ಸಂಸ್ಥೆಯ ಸ್ವಂತ 36 ಸೆಂಟ್ಸ್ ಜಾಗದಲ್ಲಿ 20 ಬಾಡಿಗೆ ರಹಿತ ಮನೆಗಳು ಸಜ್ಜಾಗಿವೆ.
ವಸತಿ ವಂಚಿತ ಹಾಗೂ ಅಶಕ್ತ 20 ಕುಟುಂಬಗಳಿಗೆ ಇಲ್ಲಿ ಆಸರೆ ಮತ್ತು ಇನ್ನಿತರ ಹಲವು ಸೌಲಭ್ಯಗಳು ಅವರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಮತ್ತು ಅವರನ್ನು ಸ್ವಾವಲಂಬಿಯಾಗಲು ಪ್ರೋತ್ಸಾಹ ನೀಡಲಾಗುವುದು. 11 ತಿಂಗಳ ಬಾಡಿಗೆ ಕರಾರಿನಂತೆ ಬಾಡಿಗೆ ಇಲ್ಲದೆ ಮನೆಗಳನ್ನು ವಾಸಿಸಲು ಅವರಿಗೆ ನೀಡಿ ಪರಿಸ್ಥಿತಿಯ ಅನುಗುಣವಾಗಿ ಇಂತಿಷ್ಟೇ ವರ್ಷ ಅವರಿಗೆ ಬದುಕು ಕಟ್ಟಿಕೊಳ್ಳಲು ಅವಕಾಶ ದೊರೆಯಲಿದೆ.
20 ಕುಟುಂಬಗಳ ಪೈಕಿ ಈಗಾಗಲೇ 2 ಕುಟುಂಬಗಳ ಆಯ್ಕೆ ಈಗಾಗಲೇ ನಡೆದಿದ್ದು ಅವರು ವಾಸ್ತವ್ಯವನ್ನು ಆರಂಭಿಸಿದ್ದಾರೆ. ಉಳಿದಂತೆ 18 ಕುಟುಂಬಗಳ ಆಯ್ಕೆಯನ್ನು ಸಂಸ್ಥೆಯ ನಿಯಮದಂತೆ ನಡೆಯಲಿದೆ.
ಹ್ಯುಮಾನಿಟಿ ಸಂಸ್ಥೆಯು ಕರ್ನಾಟಕ ರಾಜ್ಯಾದ್ಯಂತ ಅಶಕ್ತರಿಗೆ, ವಸತಿಗಾಗಿ, ಅನಾರೋಗ್ಯಕ್ಕಾಗಿ, ಶಿಕ್ಷಣಕ್ಕಾಗಿ ಹಾಗೂ ಇನ್ನಿತರ ಸಹಾಯ ನೀಡಿದ ಮೊತ್ತವು ಈಗಾಗಲೇ 10 ಕೋಟಿಯನ್ನು ದಾಟಿದೆ ಎಂದ ಅವರು ಆ.27ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಉಚಿತ ವಸತಿಯ ಲೋಕಾರ್ಪಣೆಯ ಸಭಾ ಕಾರ್ಯಕ್ರಮವು ಬನ್ನಡ್ಕದ ಪಾಂಚಜನ್ಯ ಸಭಾಂಗಣದಲ್ಲಿ ನಡೆಯಲಿದೆ.
ರಾಜ್ಯದ ಮಾಜಿ ಲೋಕಾಯುಕ್ತ ಜಸ್ಡೀಸ್ ಎನ್.ಸಂತೋಷ್ ಹೆಗ್ಡೆ ಉಚಿತ ಮನೆಗಳನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ‘ವಿಜಯ ಟೈಮ್ಸ್’ನ ವ್ಯವಸ್ಥಾಪಕ ನಿರ್ದೇಶಕಿ ವಿಜಯಲಕ್ಷ್ಮೀ ಶಿಬರೂರು ಮುಖ್ಯ ಅತಿಥಿಯಾಗಿ, ದೈಜಿವಲ್ಡ್ ಮೀಡಿಯಾ’ದ ಸಂಸ್ಥಾಪಕ ವಾಲ್ಟರ್ ನಂದಳಿಕೆ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆಂದು ತಿಳಿಸಿದರು.
ಇನ್ನೂ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಟ್ರಸ್ಟಿಗಳಾದ ರೂಪಾ ಬಲ್ಲಾಳ್, ಪ್ರಶಾಂತ್ ಫ್ಯ್ರಾಂಕ್, ಲೋಯ್ಡ್ ರೇಗೋ ಉಪಸ್ಥಿತರಿದ್ದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…