ಭಾರತೀಯ ದಂಡ ಸಂಹಿತೆ 1860 ಹಾಗೂ ಭಾರತೀಯ ಮೋಟಾರು ವಾಹನ ಕಾಯಿದೆ-1988 /2019ರ ಅಡಿ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಆ.6ರಿಂದ 20ರವರೆಗೆ ಸಂಚಾರ ನಿಯಮ ಉಲ್ಲಂಘಿಸಿದ 298 ವಾಹನ ಸವಾರ/ಚಾಲಕರ ಅನುಜ್ಞಾ ಪತ್ರ(ಡಿಎಲ್) ಅಮಾನತುಪಡಿಸುವ ಬಗ್ಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

15 ದಿನಗಳಲ್ಲಿ ಮಂಗಳೂರು ಪೊಲೀಸ್ ಕಮಿಷನರೆಟ್ ವತಿಯಿಂದ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ್ದಲ್ಲಿ 593, ಕರ್ಕಶ ಹಾರನ್ ಬಳಸಿರುವುದಕ್ಕೆ 106, ಟಿಂಟ್ ಗ್ಲಾಸ್ ಬಳಕೆಗೆ 70, ಆಟೋರಿಕ್ಷಾಗಳಲ್ಲಿ ಅಧಿಕ ದರ ವಸೂಲಿಗೆ 13, ವನ್‌ವೇಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚಾರಕ್ಕೆ 28 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.



