ಅನ್ಯಕೋಮಿನ ವ್ಯಕ್ತಿ ಮೇಲೆ ತಲವಾರು ದಾಳಿಗೆ ಯತ್ನಿಸಿದ್ದ ಕೇಸ್ ಸಂಬಂಧ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.

ಪಂಜಿಮೊಗರು ನಿವಾಸಿ ಚರಣ್ ರಾಜ್ (23), ಸುಮಂತ್ ಬರ್ಮನ್ (24), ಅವಿನಾಶ್ (24) ಬಂಧಿತ ಆರೋಪಿಗಳು ಎಂದು ಕಾವೂರು ಪೋಲಿಸರು ತಿಳಿಸಿದ್ದಾರೆ.
ಇತ್ತೀಚೆಗೆ ಮಂಗಳೂರು ಹೊರವಲಯದ ಕಾವೂರು ಎಂ.ವಿ ಶೆಟ್ಟಿ ಕಾಲೇಜು ಬಳಿ ಅನ್ಯಕೋಮಿನ ವ್ಯಕ್ತಿ ಮೇಲೆ ತಂಡವೊಂದು ತಲವಾರು ದಾಳಿಗೆ ಯತ್ನಿಸಿತ್ತು. ಸ್ಕೂಟಿಯಲ್ಲಿ ಬಂದ ಕಿಡಿಗೇಡಿಗಳು ಅಡ್ಡಗಟ್ಟಿ ಅನ್ಯ ಕೋಮಿನ ವ್ಯಕ್ತಿ ಮೇಲೆ ತಲವಾರು ಬೀಸಿದ್ದರು. ಈ ವೇಳೆ ವ್ಯಕ್ತಿ ತಪ್ಪಿಸಿಕೊಂಡರೂ ಮುಖಕ್ಕೆ ಗಾಯವಾಗಿತ್ತು.
ಇನ್ನು, ಈ ಕೇಸ್ ತನಿಖೆ ತೀವ್ರಗೊಳಿಸಿದ ಪೊಲೀಸರು ಕೇವಲ 24 ಗಂಟೆಗಳಲ್ಲಿ ತಲವಾರು ಸಮೇತ ಮೂವರ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಕೃತ್ಯಕ್ಕೆ ಬಳಸಿದ ತಲವಾರು & ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.



