ಜನ ಮನದ ನಾಡಿ ಮಿಡಿತ

Advertisement

ಮೂಡಬಿದಿರೆಗೆ ನೂತನ ಇನ್ಸ್‌ಪೆಕ್ಟರ್‌ ಆಗಿ ಸಂದೇಶ್ ನೇಮಕ

This image has an empty alt attribute; its file name is WhatsApp-Image-2023-08-23-at-11.48.06-AM.jpeg

ಮೂಡುಬಿದಿರೆ: ತನ್ನ ಕರ್ತವ್ಯದ ಮೂಲಕ ಇಲಾಖೆ ಹಾಗೂ ಸಾರ್ವಜನಿಕ ವಲಯದಲ್ಲಿ ‘ಖಡಕ್ ಖಾಕಿ’ ಎಂದೇ ಕರೆಸಿಕೊಂಡಿರುವ ಸಂದೇಶ್ ಪಿ. ಜಿ. ಅವರು ಮೂಡುಬಿದಿರೆಯ ನೂತನ ಇನ್ಸ್‌ಪೆಕ್ಟರ್‌ ಆಗಿ ನೇಮಕಗೊಂದಿದ್ದಾರೆ.

This image has an empty alt attribute; its file name is WhatsApp-Image-2023-08-23-at-11.48.06-AM.jpeg


ಕಳೆದ ಹಲವು ಸಮಯಗಳಿಂದ ಮೂಡುಬಿದಿರೆ ಇನ್ಸ್‌ಪೆಕ್ಟರ್‌ ಆಗಿ ಸಂದೇಶ್ ಅವರು ಬರುತ್ತಾರೆನ್ನುವ ಮಾಹಿತಿ ಇತ್ತಾದರೂ ಇಂದು ಅದು ಅಧಿಕೃತಗೊಂಡಿದೆ..

ಈ ಹಿಂದೆ ಕಾರ್ಕಳ, ಬೆಳ್ತಂಗಡಿ, ಬಜ್ಪೆ ಹಾಗೂ ಇನ್ನಿತರ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಸಂದೇಶ್ ಅವರು ತಮ್ಮ ದಕ್ಷತೆಯ ಕರ್ತವ್ಯದ ಮೂಲಕ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದರು. ಯಾರೊಂದಿಗೂ ರಾಜಿ ಮಾಡಿಕೊಳ್ಳದೆ ಕಾನೂನು ಹೇಗಿದೆಯೋ ಅದನ್ನು ಪಾಲಿಸಿ ಕೊಂಡು ಬಂದು, ಕಾನೂನಿಗೆ ಭಂಗತರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಸಂದೇಶ್ ಅವರ ಸ್ವಭಾವ. ಇದೇ ಕಾರಣಕ್ಕೆ ಕಳ್ಳರು, ದರೋಡಕೋರರು, ಕಾನೂನು ಕೈಗೆತ್ತಿಕೊಳ್ಳುವವರಿಗೆ ಸಿಂಹಸ್ವಪ್ನರಾಗಿದ್ದಾರೆ.


ಇ0ತಹ ದಕ್ಷ ಅಧಿಕಾರಿ ಮೂಡುಬಿದಿರೆಗೊಮ್ಮೆ ಬರಲೇ ಬೇಕೆನ್ನುವುದು ಈ ಭಾಗದ ಜನರ ಆಶಯವಾಗಿತ್ತು. ಇದೀಗ ಓರ್ವ ನಿಷ್ಠಾವಂತ, ದಕ್ಷ ಅಧಿಕಾರಿ ಮೂಡುಬಿದಿರೆಯ ಇನ್ಸ್‌ಪೆಕ್ಟರ್‌ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಮೂಡುಬಿದಿರೆಗೆ ಸಂದೇಶ್ ರಂತಹ ಖಡಕ್ ಅಧಿಕಾರಿಯ ಅವಶ್ಯವಿತ್ತು. ಇನ್ನು ಕೆಲವು ಕ್ರೈಮ್, ಅಕ್ರಮ ಚಟುವಟಿಕೆಗಳು, ಮಾದಕ ವ್ಯಸನಿಗಳಿಗೆ, ಉಂಡಾಡಿಗು0ಡರಾಗಿ ಕಾನೂನು ಕೈಗೆತ್ತಿಕೊಳ್ಳುವವರಿಗೆ ಮೂಡುಬಿದಿರೆಯಲ್ಲಿ ಖಂಡಿತ ಅವಕಾಶ ವಿಲ್ಲ ಎನ್ನುವ ಅಭಿಪ್ರಾಯಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಮೂಡುಬಿದಿರೆಯಲ್ಲಿ ಇನ್ಸ್‌ಪೆಕ್ಟರ್‌ ಆಗಿರುವ ನಿರಂಜನ್ ಅವರು ಸಕಲೇಶಪುರ ಗ್ರಾಮಾಂತರ ಇನ್ಸ್‌ಪೆಕ್ಟರ್‌ ಆಗಿ ವರ್ಗಾವಣೆಗೊಂಡಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

error: Content is protected !!