ಪುತ್ತೂರು ಪೊಲೀಸ್ ಠಾಣಾ ಬಳಿ ನಡೆದ ಚೂರಿ ಇರಿತ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಯುವಕನನ್ನು ಪದ್ಮರಾಜ್ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಯುವತಿಯನ್ನು ಅಳಿಕೆ ಮೂಲದ ಗೌರಿ (20 ) ಎಂದು ಗುರುತಿಸಲಾಗಿದೆ. ಯುವತಿ ಗಂಭೀರ ಗಾಯಗೊಂಡಿದ್ದು, ಪುತ್ತೂರಿನಿಂದ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.
ಈತ ಜೆಸಿಬಿ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ವ್ಯಕ್ತಿಯೊಬ್ಬ ಯುವತಿಗೆ ಚೂರಿಯಿಂದ ಇರಿದು ಪರಾರಿಯಾದ ಘಟನೆ ಇಲ್ಲಿನ ಮಹಿಳಾ ಪೊಲೀಸ್ ಸ್ಟೇಷನ್ ಬಳಿ ಸಂಭವಿಸಿತ್ತು.
ಪುತ್ತೂರು ಪೇಟೆಗೆ ಬಂದಿದ್ದ ಯುವತಿ ಪುತ್ತೂರಿನ ಮಹಿಳಾ ಪೊಲೀಸ್ ಸ್ಟೇಷನ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಏಕಾಏಕಿ ಬಂದ ಪದ್ಮರಾಜ್ ಚೂರಿಯಿಂದ ಇರಿದು ಪರಾರಿಯಾಗಿದ್ದ.

ಗಾಯಾಳು ಯುವತಿಯನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದು, ಯುವತಿಯ ಸ್ಧಿತಿ ಚಿಂತಾಜನಕವಾಗಿದೆ. ಯುವತಿ ಸರಕಾರಿ ಬಸ್ ನಿಲ್ದಾಣದ ಬಳಿಯ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಳು.



