ಮುಲ್ಕಿ: ದೇವಾಡಿಗ ಸಮಾಜ ಸೇವಾ ಸಂಘ (ರಿ), ಪಾವಂಜೆ ಇದರ ಸ್ಥಾಪಕ ಸದಸ್ಯರಾಗಿ, ಅಧ್ಯಕ್ಷರಾಗಿ, ಕೋಶಾಧಿಕಾರಿಯಾಗಿ, ಸಂಘಟನಾ ಕಾರ್ಯದರ್ಶಿಯಾಗಿ, ಪ್ರಸ್ತುತ ಸಲಹೆಗಾರರಾಗಿ, ಕಟ್ಟಡ ಸಮಿತಿಯ ಉಪಾಧ್ಯಕ್ಷರಾಗಿ, ರಾಜ್ಯಪ್ರಶಸ್ತಿ ಪುರಸ್ಕೃತ ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಅಧ್ಯಕ್ಷರಾಗಿ, ಸಲಹಾ ಸಮಿತಿಯ ಸದಸ್ಯರಾಗಿ, ಪಾವಂಜೆ ಸರ್ವಶಕ್ತಿ ವ್ಯಾಯಾಮ ಶಾಲೆಯ ಅಧ್ಯಕ್ಷರಾಗಿ, ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ, ಹಲವಾರು ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡ, ನಾಟಕ, ರೂಪಕ, ನೃತ್ಯ, ಯಕ್ಷಗಾನ ಕಲಾರಾಧನೆಯಲ್ಲಿ ತನ್ನದೇ ಆದ ಕಲಾಚಾತುರ್ಯ ಪಡೆದ ಸೋಮನಾಥ ದೇವಾಡಿಗ, “ಶಿವಸ್ವಾಮಿ ನಿಲಯ”, ಪಾವಂಜೆ ಯವರು ಇಂದು ಮುಂಜಾನೆ ದೈವಾಧೀನರಾಗಿದ್ದು, ಅವರ ಅಂತ್ಯ ಸಂಸ್ಕಾರ ಇಂದು ಬೆಳಗ್ಗೆ 10.30ಕ್ಕೆ ಅವರ ಸ್ವಗೃಹದಲ್ಲಿ ನೆರವೇರಿತು.




