ಇವತ್ತು ಪ್ರಜೆಗಳು ಒಂದಾಗಿ, ಸತ್ಯ, ಧರ್ಮ, ನ್ಯಾಯಕ್ಕಾಗಿ ಹೋರಾಟವನ್ನು ಮಾಡುವ ಅವಶ್ಯಕತೆಯಿದೆ. ಆಗ ಮಾತ್ರ ರಕ್ಕಸ ಕಾಮಂಧರಿಗೆ ಶಿಕ್ಷಯಾಗುತ್ತದೆ ಎಂದು ಹಿಂದು ಹೋರಾಟಗಾರ ಮಹೇಶ್ ತಿಮರೋಡಿ ಗುಡುಗಿದ್ದಾರೆ. ಇವರು ಸೌಜನ್ಯ ಪರವಾಗಿ ಮೂಲ್ಕಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತಾನಾಡಿ, ಪ್ರಜೆಗಳ ತೆರಿಗೆಯನ್ನು ನೀಚ ಕೃತ್ಯ ಎಸಗಿದವರ ರಕ್ಷಣೆಗಾಗಿ ಖರ್ಚು ಮಾಡುತ್ತಿದ್ದಾರೆ.

ಇಂತಹ ಪಾಪಿಗಳಿಗೆ ಸರ್ವಶಕ್ತ ಆ ದೇವರು ಶಾಪವನ್ನು ನೀಡಲಿ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಸೌಜನ್ಯ ತಾಯಿ ಕುಸುಮಾವತಿ ಮಾತಾನಾಡಿ, ಸೌಜನ್ಯಳಿಗೆ ನಾವು ಒಂದು ಪೆಟ್ಟು ಕೊಟ್ಟವರಲ್ಲ, ಅಷ್ಟೂ ಮುದ್ದಾಗಿ ಬೆಳೆಸಿದ ಮಗಳನ್ನ ನೀಚ ರಕ್ಕಸರು ಕ್ರೂರವಾಗಿ ಸಾಯಿಸಿದ್ರು. ತಮ್ಮ ಮಗಳನ್ನ ನೆನೆದು ಸೌಜನ್ಯ ತಾಯಿ ಕಣ್ಣಿರಿಟ್ಟಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ನಗರ ಪಂಚಾಯತ್ ಅಧ್ಯಕ್ಷ ಸುಭಾಷ್ ಶೆಟ್ಟಿ, ಮೂಲ್ಕಿ ಮಸೀದಿ ಧರ್ಮಗುರು ಮತ್ತಿತರರು ಉಪಸ್ಥಿತರಿದ್ದರು. ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯ ತಾಯಿ ಕುಸುಮಾವತಿ ಸಹಿತ ಇತರರು ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.







