ಜಗತ್ತಿನಲ್ಲಿಯೇ ಈವರೆಗೆ ಯಾರೂ ಕಾಲಿಡದ ಚಂದ್ರನ ದಕ್ಷಿಣ ಭಾಗಕ್ಕೆ ಭಾರತದ ಚಂದ್ರಯಾನ -3 ರ ಲ್ಯಾಂಡರ್ ಇಳಿದಿದೆ. ಇಡೀ ದೇಶವೇ ಸಂಭ್ರಮ ಪಡುವಂತೆ ಮಾಡಿದ ಇಸ್ರೋದ ಈ ಸಾಧನೆಯಲ್ಲಿ ದೇಶದ ನೂರಾರು ವಿಜ್ಞಾನಿಗಳು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಇವರಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ 11 ಮಂದಿ ವಿಜ್ಞಾನಿಗಳು ಭಾಗಿಯಾಗುವ ಮೂಲಕ ಕರಾವಳಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.




