ಸೌಜನ್ಯ ಕೊಲೆ ಪ್ರಕರಣದ ಹೋರಾಟದ ಬಿಸಿಯ ಜೊತೆ 20 ವರ್ಷಗಳ ಹಿಂದೆ ನಡೆದ ಬಂಟ್ವಾಳದ ಸಿದ್ಧಕಟ್ಟೆಯ ಕು|ಭಾರತಿ ಕೊಲೆ ಮತ್ತು 22 ವರ್ಷಗಳ ಹಿಂದೆ ನಡೆದ ದಲಿತ ಮುಖಂಡ ಬಾಂಬಿಲ ಶಿವಪ್ಪ ಬಂಗೇರ ಕೊಲೆ ಪ್ರಕರಣದ ಮರು ತನಿಖೆ ನಡೆಸಲು ಒತ್ತಾಯಿ ಬಂಟ್ವಾಳ ತಹಶಿಲ್ದಾರರ ಮೂಲಕ ಮಾಜಿ ಜಿ.ಪಂ. ಉಪಾಧ್ಯಕ್ಷ ಯಂ. ತುಂಗಪ್ಪ ಬಂಗೇರರ ನೇತೃತ್ವದಲ್ಲಿ ಮುಖ್ಯಮಂತ್ರಿಗೆ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷರಾದ ಶಾರದ, ಅಮ್ಟಾಡಿ ಗ್ರಾ.ಪಂ.ಅಧ್ಯಕ್ಷ ವಿಜಯ ಕುಮಾರ್ ಸೇರಿದಂತೆ ನ್ಯಾಯಪರ ಹೋರಾಟಗಾರರು ಉಪಸ್ಥಿತರಿದ್ದರು.



