ಕನ್ನಡ ಕಿರುತೆರೆಯ ಅಗ್ನಿ ಪರೀಕ್ಷೆಯ ದಿನ ಅಂದ್ರೆ, ಗುರುವಾರ. ಈ ವಾರ ಜನ ಯಾರ ಕೈ ಹಿಡಿದ್ರು?ಯಾರ ಕೈನ ಬಿಟರು? ಯಾರು ರೇಸ್ನಿಂದ ಆಚೆ ಉಳಿದಿದ್ದಾರೆ? ಯಾರು ರೇಸ್ನಲ್ಲಿದ್ದಾರೆ ಇದ್ದೆಲ್ಲದಕ್ಕೂ ಉತ್ತರ ಇಲ್ಲಿದೆ.
ಮೊದಲ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು ಎಂದಿನಂತೆ ಡಬಲ್ ಡಿನಿಟ್ 11.3 ಟಿವಿಆರ್ ಪಡೆದುಕೊಂಡು ರಾರಾಜಿಸುತ್ತಾ ಇದೆ. ಇನ್ನೂ ಅಚ್ಚರಿಯಂತೆ ಹಾಗೂ ಅಂದುಕೊಂಡತೆ, ಸೀತಾ ರಾಮ ಗಟ್ಟಿಮೇಳವನ್ನ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿ ಬೀಗಿದೆ. ಹೌದು ಇಷ್ಟು ದಿನ ಗಟ್ಟಿಮೇಳ ಎರಡನೇ ಸ್ಥಾನವನ್ನ ಯಾರಿಗೂ ಬಿಟ್ಟುಕೊಡದೆ ತನ್ನ ಪ್ರಬುದ್ಧತೆ ಮೆರೆದಿತ್ತು. ಆದ್ರೆ ಸೀತಾರಾಮ ಅದನ್ನ ಬಂದ ನಾಲ್ಕೇ ವಾರಕ್ಕೆ ಧೂಳಿಪಟ ಮಾಡಿದೆ. ಸೀತಾ ರಾಮನಿಗೆ ವೀಕ್ಷಕರು 8.9ಟಿವಿಆರ್ ನೀಡಿದ್ರೆ, ಗಟ್ಟಿಮೇಳಾಗೆ 8.8ಕೊಟ್ಟಿದ್ದಾರೆ.
ಇನ್ನೂ ಶ್ರೀರಸ್ತು ಶುಭಮಸ್ತು ಮದುವೆಯ ಎಪಿಸೋಡ್ಸ್ಗಳಿಗೆ ವೀಕ್ಷಕರು ಶರಣಾಗಿದ್ದಾರೆ. ಈ ಬಾರಿ ನಾಲ್ಕನೆ ಸ್ಥಾನದಲ್ಲಿ 7.9 ಟಿವಿಆರ್ ಪಡೆದು ಮಾಧವ-ತುಳಸಿ ನಂಟು ಬಿಗಿಯಾಗಿದೆ. ಇನ್ನೂ ಐದನೇ ಸ್ಥಾನದಲ್ಲಿ 7.6 ಟಿವಿಆರ್ ಪಡೆದು ಗೌತಮ್ -ಭೂಮಿಕ ಎಲ್ಲರನ್ನ ರಂಜಿಸ್ತಾ ಇದ್ದಾರೆ.ಈ ಬಾರಿ ಟಾಪ್ ಐದು ಸ್ಥಾನವನ್ನ ಅಲಂಕರಿಸಿದ್ದು ಜೀವಾಹಿನಿಯ ಕತೆಗಳೇ.
ಕಲರ್ಸ್ ವಾಹಿನಿಯಲ್ಲಿ ಸದ್ಯ ಲಕ್ಷ್ಮೀ ಬಾರಮ್ಮ ಕತೆಗೆ ಜನ ಒತ್ತು ಕೊಡ್ತಿದ್ದಾರೆ. 6.8 ಟಿವಿಆರ್ ಪಡೆದುಕೊಂಡು ಎಲ್ಲರನ್ನ ರಂಜಿಸ್ತಾ ಬಂದಿದೆ. ಇನ್ನೂ ರಾಮಾಚಾರಿ ವಾರದಿಂದ ವಾರಕ್ಕೆ ಅಗ್ನಿಪರೀಕ್ಷೆ ಎದುರಿಸ್ತಾ ಇದೆ. ಇತ್ತ ಸೈಕಲ್ ಗ್ಯಾಪ್ನಲ್ಲಿ ಗೀತಾ 5.9 ಟಿವಿಆರ್ ಪಡೆದು ಭಾಗ್ಯಲಕ್ಷ್ಮೀಯನ್ನೆ ಹಿಂದಿಕ್ಕಿದೆ. ಒಟ್ಟಿನಲ್ಲಿ ಟಿಆರ್ಪಿ ಲಿಸ್ಟ್ ಹೊರ ಬಿದ್ದಿದ್ದು, ಈ ವಾರದ ಸೀರಿಯಲ್ಗಳ ಲೆಕ್ಕಾಚಾರಕ್ಕೆ ತೆರೆ ಬಿದ್ದಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿರುವ ಖ್ಯಾತ ಕ್ರೀಡಾಪಟು ಎಂ.ಆರ್. ಪೂವಮ್ಮ ಅವರನ್ನು ದಕ್ಷಿಣ…
ಖ್ಯಾತ ಸಾಹಿತಿ ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ಕಲ್ಕೂರ ಪ್ರತಿಷ್ಠಾನದ ಕಾರಂತ ಪ್ರಶಸ್ತಿ ಸಮಿತಿ ನೀಡುವ 2026ನೇ ಸಾಲಿನ…
ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆಯೊಂದು ಡಿಕ್ಕಿಯಾಗಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಅನಿಲ ಸಮೀಪ ನಡೆದಿದೆ. ಹೆದ್ದಾರಿಯಲ್ಲಿ ಕಾರು ಸಂಚರಿಸುತ್ತಿದ್ದ…
ಅಂತಾರಾಷ್ಟ್ರೀಯ ಹಾಗೂ ವಿಶ್ವಮಟ್ಟದ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುವ ಕರ್ನಾಟಕದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಪ್ರೋತ್ಸಾಹಧನ ತೀರಾ ಕಡಿಮೆಯಾಗಿದ್ದು, ಇತರ…
ತಾಲೂಕಿನ ವಿವಿಧೆಡೆ ಚಿರತೆ ಓಡಾಟ ಕಂಡುಬಂದಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎರಡು ಕಡೆ ಬೋನು…
ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮಾಡೂರು ಯೂಸುಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಮಂಗಳೂರಿನ ಎರಡನೇ ಹೆಚ್ಚುವರಿ…