ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ನವೀಕೃತ ದೇಗುಲದಲ್ಲಿ “ಪುನಃಪ್ರತಿಷ್ಠೆ, ಬ್ರಹ್ಮಕುಂಭಾಭಿಷೇಕ, ನಾಗಮಂಡಲೋತ್ಸವ ಹಾಗೂ ದೈವದ ನೇಮೋತ್ಸವವು ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ಭಾನುವಾರ ದೇವಳದ ಸಭಾಭವನದಲ್ಲಿ ಭಕ್ತರ ಹಾಗೂ ವಿವಿಧ ಸಮಿತಿಯ ಸದಸ್ಯರ ವಿಶೇಷ ಸಭೆ ನಡೆಯಿತು.

ಸಭೆ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಮಾತನಾಡಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ದಾರ ಕಾರ್ಯದಲ್ಲಿ ಅಸಂಖ್ಯಾತ ದಾನಿಗಳು ಹಾಗೂ ಭಕ್ತರು ಸಹಕರಿಸಿದ್ದು ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ನಡೆಯುವ ದೃಢಕಲಶ , ಕ್ಷೇತ್ರಕ್ಕೆ ನೂತನ ಗೋಪುರ ಹಾಗೂ ಉಳಿದ ಕಾಮಗಾರಿಗಳಿಗೆ ಭಕ್ತರು ಸಹಕರಿಸಬೇಕು ಎಂದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರಿದಾಸ್ ಭಟ್ ರವರು ಬ್ರಹ್ಮಕಲಶ ಮಹೋತ್ಸವದ ಲೆಕ್ಕ ಪತ್ರ,ಮುಂದಿನ ಕಾರ್ಯ ಯೋಜನೆಯ ಬಗ್ಗೆ ಮಾತನಾಡಿದರು.ಸಭೆಯಲ್ಲಿ ಕ್ಷೇತ್ರದ ಅರ್ಚಕ ಮಧುಸೂದನ್ ಆಚಾರ್ಯ, ಮಾಜೀ ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಸಮಿತಿಯ ಉಪಾಧ್ಯಕ್ಷ ಮೋಹನ ದಾಸ್, ಎಸ್ಕೆಪಿಎ ನ ಮೋಹನ್ ರಾವ್ ಭಕ್ತಾದಿಗಳು ಮತ್ತಿತರರು ಉಪಸ್ಥಿತರಿದ್ದರು.







