ಬಂಟ್ವಾಳ: ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಪೇಟೆಯಲ್ಲಿರುವ ಸರಕಾರಿ ಬಾವಿಯೊಂದನ್ನು ಉಳಿಸುವಿರಾ? ಹೀಗೊಂದು ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.
ಇದು ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಸರಕಾರಿ ಶಾಲೆಯೊಂದರ ಸಮೀಪದಲ್ಲಿ ಗಿಡಗಂಟಿಪೊದೆಗಳಿಂದ ಆವೃತ್ತವಾಗಿರುವ ಕಸಕಡ್ಡಿಗಳು ತುಂಬಿ ಶಿಥಿಲಾವಸ್ಥೆಗೆ ತಲುಪಲು ರೆಡಿಯಾಗಿರುವ ಬಾವಿಯ ಕಥೆ. ಪಕ್ಕದಲ್ಲಿ ಸರಕಾರಿ ಶಾಲೆ ಸುಮಾರು ದಶಕಗಳ ಹಿಂದೆ ಇದೇ ಬಾವಿಯ ನೀರು ಶಾಲೆಯ ಉಪಯೋಗಕ್ಕೆ ಮೀಸಲಿತ್ತು.
ಮತ್ತೆ ಆಧುನಿಕ ಯುಗ ಪೈಪ್ ಲೈನ್ ಬಳಕೆಯಾದಂತೆ ಬಾವಿಯ ಅವಶ್ಯಕತೆ ಕಡಿಮೆಯಾಯಿತು. ನೇತ್ರಾವತಿ ನದಿ ಸಮೀಪದಲ್ಲಿರುವದರಿಂದ ಬಾವಿಯ ಅವಶ್ಯಕತೆ ಕಡಿಮೆ ಅಂತಲೇ ಹೇಳಬಹುದು. ಮತ್ತೆ ಬಾವಿಯಿಂದ ರಾಟೆ ಮೂಲಕ ನೀರು ಎಳೆಯುವ ಪದ್ದತಿ ನಿಂತು ಹೋಗಿದೆ. ಪಂಪ್ ಮೂಲಕ ನೀರು ಮೆಲಕ್ಕೆತ್ತುವ ಸಾಧನಗಳು ಬಂದಿವೆ. ಆದರೆ ಇಲ್ಲಿ ಬಾವಿಯ ಅವಶ್ಯಕತೆ ಕಡಿಮೆಯಾಗುತ್ತಾ ಬಂತು.ಪುರಸಭಾ ವ್ಯಾಪ್ತಿಯಲ್ಲಿ ಇಲಾಖೆ ಪೈಪ್ ಮೂಲಕ ಶುಧ್ದ ಕುಡಿಯುವ ನೀರನ್ನು ಮನೆಬಾಗಿಲಿಗೆ ಪೂರೈಕೆ ಮಾಡತೊಡಗಿದಾಗ ಬಾವಿ ತನ್ನಿಂದ ತಾನೆ ತನ್ನ ಸೌಂದರ್ಯ ಕಳಚುತ್ತಾ ಬಂತು.
ಹಾಗೆ ಮುಂದುವರಿದು ಇದೀಗ ಪಾಣೆಮಂಗಳೂರಿನಲ್ಲಿ ಸರಕಾರಿ ಬಾವಿಯೊಂದತ್ತಾ? ಅದು ಎಲ್ಲಿತ್ತು,ಹೀಗ ಹೇಗಿದೆ ಎಂದು ಹುಡುಕುವ ಸ್ಥಿತಿ ಉಂಟಾಗಿದೆ.
ಸಾವಿರಾರು ಜನರ ಬಾಯಾರಿಕೆ ಕಡಿಮೆ ಮಾಡಿ ಅದೆಷ್ಟೋ ಜನರ ಜೀವನಕ್ಕೆ ಮತ್ತು ಜೀವಕ್ಕೆ ಪೂರಕವಾಗಿದ್ದು,
ಇಲ್ಲಿ ಪೊದೆಗಳ ಮಧ್ಯೆ ಅವಿತುಕೊಂಡು ಬೇಸರದಲ್ಲಿರುವ ಬಾವಿಯ ಪುನಶ್ಚೇತನ ಮಾಡುವ ಕಾರ್ಯ ಆಗಬೇಕಾಗಿದೆ. ಪುರಸಭಾ ಇಲಾಖೆಯಲ್ಲಿ ಕೆರೆಗಳ ಪುನಶ್ಚೇತನಕ್ಕೆ ಅವಕಾಶಗಳಿವೆ,ಆದೇ ರೀತಿ ಅಲ್ಲೊಂದು ಇಲ್ಲೊಂದು ಅಳಿದುಳಿದ ಅಳಿವಿನಂಚಿನಲ್ಲಿರುವ ಸರಕಾರಿ ಬಾವಿಗಳ ಉಳಿಸಲು ಇಲಾಖೆಯ ಜೊತೆಗೆ ಊರಿನ ಸಂಘಸಂಸ್ಥೆಗಳು ಮುಂದೆ ಬಂದರೆ ಜಲಸಂರಕ್ಷಣೆಯ ಜೊತೆ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡಬಹುದು.
ಅಂಬಾಸಿಡರ್ ಕಾರುಗಳ ತೊಳೆಯುವ ಸ್ಥಳವಾಗಿದೆ
ಅದೊಂದು ಕಾಲವಿತ್ತು ಅಂಬಾಸಿಡರ್ ಕಾರುಗಳ ತವರೂರು ಎಂದೇ ಕರೆಯಲ್ಪಟ್ಟ ಜಿಲ್ಲೆಯಲ್ಲಿ ಬಂಟ್ವಾಳದಲ್ಲಿ ಅಂಬಾಸಿಡರ್ ಕಾರುಗಳದ್ದೆ ಕಾರುಬಾರು. ಹಿರಿಯರು ಒಬ್ಬ ಹೇಳುವ ಪ್ರಕಾರ ಬಾಡಿಗೆ ಮುಗಿಸಿ ಸಂಜೆ ವೇಳೆ ಬರುವ ಕಾರುಗಳು ಮತ್ತು ಬೆಳಿಗ್ಗೆ ಎದ್ದು ರೆಡಿಯಾಗುವ ಕಾರುಗಳನ್ನು ಇದೇ ಬಾವಿಯಿಂದ ನೀರು ತೆಗೆದು ತೊಳೆಯುತ್ತಿರುವ ದೃಶ್ಯಗಳನ್ನು ಕಂಡಿದ್ದೇವೆ.ಆದರೆ ಈಗ ಅಂಬಾಸಿಡರ್ ಕಾರುಗಳೆ ಮಾಯವಾಗಿ ಬಿಟ್ಟಿದೆ.ಮತ್ತೆ ಬಾವಿಯಿಂದ ನೀರು ಎಳೆಯುವುದು ಕನಸಿನ ಮಾತು ಎಂದು ನಗೆಬೀರಿದರು.
ಸರಕಾರದ ಬಾವಿಗಳು ಅಲ್ಲಲ್ಲಿ ತೋಡಲಾಗಿ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಿಕೊಟ್ಟ ಕಾಲ. ರಾಟೆ ಹಾಕಿ ನೀರು ಸೇದುವ ಅ ಸಮಯದಲ್ಲಿ ಶಾಲೆಗಳಿಗೂ ಅದೇ ಬಾವಿಗಳ ನೀರನ್ನು ಉಪಯೋಗಿಸುವ ದಿನಗಳು.ಬರಬರುತ್ತಾ ಕಡಿಮೆಯಾಗುತ್ತಾ ಬಂತು ಹ್ಯಾಂಡ್ ಬೋರ್ ವೆಲ್ ಗಳು ಪರಾಕ್ರಮ ಬೀರಿತು. ಮುಂದಿನ ದಿನಗಳು ಸಂಪೂರ್ಣ ಬೊರ್ ವೆಲ್ ಗಳಿಗೆ ಆಯಿತು. ಪೈಪ್ ಮೂಲಕ ನೀರು ಬಂತು.ಹಾಗಾಗಿ ಬಾವಿಗಳು ಮುಚ್ಚಿದವು.ಕೆರೆಗಳು ಹಳ್ಳಗಳು ಬತ್ತಿದವು. ಹೀಗೊಂದು ಆಗೊಂದು ಬಾವಿಗಳು ಕಾಣಸಿಕ್ಕರೆ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶಕ್ಕೆ ಆಗಿಯಾದರು ಉಳಿಸುವ ಕೆಲಸ ಮಾಡಿದರೆ ಉತ್ತಮ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.
ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.…
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ ಕಾಣೆಯಾದವರಾಗಿದ್ದು, ದೂರುದಾರರ ಪ್ರಕಾರ,…
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…
ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…
ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…