ಕರಾವಳಿ

ಮಂಗಳೂರಿನಲ್ಲಿ ತಾರಕಕ್ಕೇರಿದ ಜೋಗಿ ಸಮುದಾಯ ಮತ್ತು ಜೋಗಿ ಮಠದ ಮಠಾಧೀಶರ ಸಮಸ್ಯೆ

ದಕ್ಷಿಣ ಕನ್ನಡ : ಮಂಗಳೂರಿನಲ್ಲಿ ಜೋಗಿ ಸಮುದಾಯ ಮತ್ತು ಜೋಗಿ ಮಠದ ಮಠಾಧೀಶರ ಸಮಸ್ಯೆ ತಾರಕಕ್ಕೇರುವ  ಎಲ್ಲ ಲಕ್ಷಣಗಳು ಇದೆ, ಇದಕ್ಕೆ ಪೂರಕ ಎಂಬಂತೆ ಜೋಗಿ ಮಠದ ಹಿತರಕ್ಷಣಾ ಸಮಿತಿ ಮುಖ್ಯಸ್ಥರು ಪತ್ರಿಕಾಗೋಷ್ಠಿ ನಡೆಸಿ ಮಠದ ಆವರಣದಲ್ಲಿ ಉಪವಾಸ ಸತ್ಯಾಗ್ರಹದ ಮುನ್ಸೂಚನೆಯನ್ನು ನೀಡಿದ್ದಾರೆ.


ಉತ್ತರ ಭಾರತದ ಯೋಗಿ ಪರಂಪರೆಗೆ  ಸಂಬಂಧವಿರುವ ಕದ್ರಿ ಜೋಗಿಮಠದ ಸಂಬಂಧ ಇಂದು ನಿನ್ನೆಯದಲ್ಲ, ಸಮಸ್ತ ಜೋಗಿ ಸಮುದಾಯದ ಶ್ರದ್ಧಾ ಕೇಂದ್ರವಾದ ಮಠದಲ್ಲಿ ಇತ್ತೀಚಿನ  ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಮಠಾಧೀಶರು , ಶಿಷ್ಯರಿಗೆ ಮತ್ತು ಸಮಾಜಕ್ಕೆ ತಿಳಿಯದಂತೆ  ಜೋಗಿಮಠದ ಕಾಲಭೈರವ ದೇವರ ಮೂಲ ಮೂರ್ತಿಯನ್ನು ಹೊರಗಿಟ್ಟು ನೂತನ ಮೂರ್ತಿಯನ್ನು ಗರ್ಭಗುಡಿಯೊಳಗೆ ಪ್ರತಿಷ್ಠಾಪಿಸಿದ್ದಾರೆ ಎಂಬುದು ಸಮಾಜದ  ಆರೋಪ ಮತ್ತು ಪರಸ್ಪರ ಆರೋಪ ಪ್ರತ್ಯಾರೋಪಕ್ಕೆ ಕಾರಣ.


ಮಠದ ಆವರಣದಲ್ಲಿರುವ  ಕಾಲಭೈರವ ದೇವರ ಮೂರ್ತಿ ಬಹಳ ಕಾರಣಿಕವುಳ್ಳದ್ದು ಎಂಬುದು ಭಕ್ತರ ನಂಬಿಕೆ.  ಬ್ರಹ್ಮಕಲಶೋತ್ಸವದ ವೇಳೆ ಮಠಾಧೀಶ ರಾಜಯೋಗಿ ಶ್ರೀ ನಿರ್ಮಲನಾಥ ಮಹಾರಾಜರು ತಮ್ಮ ರಾಜಸ್ತಾನಿ ಭಕ್ತರೊಂದಿಗೆ ಸೇರಿಕೊಂಡು, ಜೋಗಿ ಸಮುದಾಯವನ್ನು ಕಡೆಗಣಿಸಿ ಸ್ವಇಚ್ಛೆಯಿಂದ ಹಳೆಯ ಮೂರ್ತಿಯನ್ನು ಬದಲಾಯಿಸಿ,  ರಾಜಸ್ತಾನಿ ಭಕ್ತರು ನೀಡಿರುವ ನೂತನ ಗ್ರಾನೈಟ್ ಕಾಲಭೈರವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.  ಇದು ಶಿಷ್ಯರಿಗೆ ತಿಳಿದು ಡಿಸಿ, ಪುರಾತತ್ವ ಇಲಾಖೆಗಳಿಗೆ ದೂರು ನೀಡಿ ಮೂಲ ಮೂರ್ತಿಯನ್ನು ಉಳಿಸುವ ಮತ್ತು ಪುನರ್ಪ್ರತಿಷ್ಠಾಪಿಸುವ ಪ್ರಯತ್ನ ಮಾಡಲಾಗಿದೆ.


 ಜೋಗಿಮಠದ ಹಿತರಕ್ಷಣಾ ಸಮಿತಿಯು ಪುರಾತತ್ವ ಇಲಾಖೆ ಮೂಲಕ ಕಾಲಭೈರವನ ಮೂಲ ಮೂರ್ತಿಯನ್ನು ಪುನರ್ ಪ್ರತಿಷ್ಠಾಪಿಸಲು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದೆ. ಅಲ್ಲದೆ ತನಿಖೆಗೆ ಆಗ್ರಹವನ್ನೂ ಮಾಡಲಾಗಿದೆ. ಆದರೆ ಮಠಾಧೀಶರು ನಮ್ಮ ಮನವಿಗೆ ಸೊಪ್ಪು ಹಾಕದೆ, ಡಿಸಿಯವರ ಆದೇಶಕ್ಕೂ ಕಿಮ್ಮತ್ತಿನ ಬೆಲೆ ನೀಡುತ್ತಿಲ್ಲ. ಇದೀಗ ಮಠದ ಶಿಷ್ಯ ಪರಂಪರೆ ಮಠಾಧೀಶರ ವಿರುದ್ಧವೇ ಸಿಡಿದೆದ್ದಿದ್ದು,  ಸಮಸ್ತ ಜೋಗಿಸಮುದಾಯು ಮಠದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ, ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿ ಅವರು ಇಂದು ನಿಧನರಾಗಿದ್ದಾರೆ. ಕಳೆದ ರಾತ್ರಿ ಸಮಾರಂಭವೊಂದರಲ್ಲಿ…

4 days ago

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಪ್ರೆಸಿಡೆಂಟ್ ಕನ್ವೆನ್ಷನ್ ಹಾಲ್ ಮುಂಭಾಗ…

4 days ago

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ. ರಿಷಬ್…

4 days ago

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು -ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮೋರಿಗೆ…

4 days ago

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ದಕ್ಷಿಣ…

4 days ago

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ವಸತಿಗೃಹವೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿದ ಆರೋಪಿಗಳಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಬಂಟ್ವಾಳ ಸಜೀಪ ಮುನ್ನೂರು…

4 days ago