ಮಹಿಳೆಯೋರ್ವಳು ಹಳಿ ದಾಟುವಾಗ ಗೂಡ್ಸ್ ರೈಲಿಗೆ ಸಿಲುಕಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ರಾಜಾನುಕುಂಟೆಯಲ್ಲಿ ನಡೆದಿದೆ.

ಅದ್ದಿಗಾನಹಳ್ಳಿಯಿಂದ ರಾಜಾನುಕುಂಟೆಗೆ ಬರುವಾಗ ರೈಲಿನ ಅಡಿಗೆ ಸಿಲುಕಿ ಮಹಿಳೆ ಹೇಗೋ ಎಸ್ಕೇಪ್ ಆಗಿದ್ದಾಳೆ.
ಇನ್ನು, ರಾಜಾನುಕುಂಟೆ ರೈಲ್ವೇ ನಿಲ್ದಾಣದಲ್ಲಿ ಮಹಿಳೆ ರೈಲು ಹಳಿ ದಾಟಲು ಮುಂದಾದಳು. ರೈಲಿನ ಕೆಳಗಿನಿಂದಲೇ ಮಹಿಳೆ ಹಳಿ ದಾಟುವಾಗ ಈ ಘಟನೆ ನಡೆದಿದೆ. ದಿಢೀರ್ ರೈಲು ಹೊರಟಿದ್ದು, ಸಮಯ ಪ್ರಜ್ಞೆಯಿಂದ ಮಹಿಳೆ ಮಲಗಿದ್ದಾಳೆ.
ಕಣ್ಣು, ಕಿವಿ ಮುಚ್ಚಿಕೊಂಡು ಮಲಗಿ ಸೇಫ್ ಆಗಿದ್ದಾಳೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಈ ಸಂಬಂಧ ರೈಲ್ವೇ ಪೊಲೀಸ್ ಠಾಣೆಯಲ್ಲಿ ಕೇಸ್ ಆಗಿದೆ.



