ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿಯಲ್ಲಿ ಕಳೆದ ಐದು ತಿಂಗಳ ಹಿಂದೆ ಜಕರಾಯ್ ದಳವಾಯಿ ನಾಪತ್ತೆ ಆಗಿದ್ದಾನೆ ಎಂದು ಪ್ರಕರಣ ದಾಖಲಾಗಿತ್ತು.
ಜಕರಾಯನ ಪತ್ನಿ ಇಂಗಳೇಶ್ವರ ರಸ್ತೆಯ ಬಳಿ ಜಕರಾಯ್ ಜಯಶ್ರೀ ನಡುವಳಿಕೆ ಅನುಮಾನ ಜೊತೆಗೆ ಇವರ ಮಗಳ ಕೆಲವೊಂದು ಮಾಹಿತಿ ಮೇರೆಗೆ ಪೊಲೀಸರು ಪ್ರಕರಣ ಬೆನ್ನತ್ತಿದ್ದಾಗ, ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಪ್ರಿಯಕರನೊಂದಿಗಿನ ಸೇರಿ ಗಂಡನಿಗೆ ಸ್ಕೆಚ್ ಹಾಕಿರೋದು ಬೆಳಕಿಗೆ ಬಂದಿದೆ.
ಜಕರಾಯ್‌ನನ್ನು ಕೊಡಲಿಯಿಂದ ಕೊಲೆಗೈದು ಮೃತದೇಹ ಸುಟ್ಟು ಯಾರಿಗೂ ಅನುಮಾನ ಬಾರದ ರೀತಿಯಲ್ಲಿದ್ರು. ನಾಪತ್ತೆ ಆಗಿದ್ದಾನೆ ಅಂತ ಬಿಂಬಿಸಿದ್ದರು. ಪತ್ನಿ ಜಯಶ್ರೀ ದಳವಾಯಿ ಹಾಗೂ ಡೋಂಗ್ರಿಸಾಬ್ ಬೊಮ್ಮನಳ್ಳಿ ಮಧ್ಯೆ ಅನೈತಿಕ ಸಂಬಂಧ ಜಕರಾಯನಿಗೆ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಡೋಂಗ್ರಿಸಾಬನೊಂದಿಗೆ ಜಗಳಾಡಿದ್ದನು. ಪತ್ನಿ ಜಯಶ್ರೀ ಹಾಗೂ ಪ್ರಿಯಕರ ಸೇರಿ ಕೊಲೆ ಮಾಡುವ ಪ್ಲಾನ್ ಮಾಡಿಕೊಂಡು ಹತ್ಯೆ ಮಾಡಿದ್ದಾರೆ.
ಜಯಶ್ರೀ ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಅಡುಗೆ ಮಾಡಲು ಹೋಗ್ತಿದ್ದಳು ಈ ವೇಳೆ ಅಲ್ಲೇ ಕೆಲಸ ಮಾಡ್ತಿದ್ದ ಡೋಂಗ್ರಿಸಾಬ ಪರಿಚಯವಾಗಿ ಇವರಿಬ್ಬರ ಮಧ್ಯೆ ಲವ್ ಶುರುವಾಗಿತ್ತು. ಕಳೆದ ಮೂರು ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು.
ಇನ್ನು ಜಕರಾಯನ್ನು ಕೊಡಲಿಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದು, ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಶವವನ್ನು ಬೈಕ್‌ನಲ್ಲಿ ತೆಗೆದುಕೊಂಡು ಹೋಗಿ ಬಾವಿಯೊಂದರ ಬಳಿ ಅರ್ಧ ಮರ್ಧ ಸುಟ್ಟು ಪರಾರಿಯಾಗಿದ್ದರು. ಅಲ್ಲದೇ, ದೇಹ ಸುಟ್ಟಿರುವ ಜಾಗದ ಪಕ್ಕದಲ್ಲಿರುವ ಬಾವಿಯಲ್ಲಿ ಎಸೆದು ಎಸ್ಕೇಪ್ ಆಗಿದ್ದರು. ಅಲ್ಲದೇ, ಮೃತನ ಎಟಿಎಂ ಕಾರ್ಡ್, ಬೈಕ್ ಲೈಸನ್ಸ್, ಪ್ಯಾನ್‌ಕಾರ್ಡ್, ಹತ್ಯೆಗೆ ಬಳಸಿದ ಕೊಡಲಿ ಬಾವಿಯಲ್ಲಿ ಎಸೆದಿದ್ದರು. ವಿಜಯಪುರ ಎಸ್ಪಿ ಹೆಚ್ ಡಿ ಆನಂದಕುಮಾರ್ ವಿಶೇಷ ತಂಡ ರಚಿಸಿದ್ದರು. ಇದೀಗ ಆರೋಪಿಗಳಿಬ್ಬರನ್ನು ಬಂಧಿಸಿ, ನ್ಯಾಯಾಲಯಕ್ಕೊಪ್ಪಿಸಿದ್ದಾರೆ..
ಬಸ್‌ನಿಂದ ಇಳಿದು ರಸ್ತೆ ಬದಿಗೆ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕೂಲಿ ಕಾರ್ಮಿಕನೊಬ್ಬ ಸ್ಥಳದಲ್ಲೇ…
ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದ ಆರೋಪಿಗಳಿಬ್ಬರ ಮೃತದೇಹಗಳು ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಚಾರ್ಸಲ್ ಪ್ರದೇಶದ…
ಉಡುಪಿ ನಗರದ ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್‌ವೊಂದು ಕಳವಾಗಿರುವ ಘಟನೆ ಸೆ.29ರಂದು ಬೆಳಕಿಗೆ ಬಂದಿದ್ದು,…
ಮಂಗಳೂರು ವಿಶ್ವವಿದ್ಯಾನಿಲಯದ 16 ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು 2026-27ನೇ ಶೈಕ್ಷಣಿಕ ಸಾಲಿನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೋರ್ಸ್‌ಗಳನ್ನು ಮುಂದುವರಿಸಲು ಅಗತ್ಯವಿರುವಷ್ಟು ವಿದ್ಯಾರ್ಥಿಗಳು…
ಮಂಗಳೂರು ಮತ್ತು ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕ ಭಾಗದಲ್ಲಿ ಕರ್ನಾಟಕ ಹೈಕೋರ್ಟ್‌ನ ಸರ್ಕ್ಯೂಟ್ ಬೆಂಚ್ ಅಥವಾ ಶಾಶ್ವತ ಪೀಠ ಸ್ಥಾಪಿಸುವ…
ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಪ್ರಯಾಣಿಸುತ್ತಿದ್ದ ಕಾರಿಗೆ ಗೂಡ್ಸ್ ಆಟೋ ರಿಕ್ಷಾ ಡಿಕ್ಕಿಯಾಗಿ, ತೀವ್ರವಾಗಿ ಗಾಯಗೊಂಡಿದ್ದ ಆಟೋ…