ಕೊಲ್ಲಮೊಗ್ರುವಿನ ಬಸ್ಸು ನಿಲ್ದಾಣದ ಬಳಿ ಹಣವನ್ನು ಪಣಕ್ಕಿಟ್ಟು ಲೂಡದ ದಾಳವನ್ನು ಉಪಯೋಗಿಸಿ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಓರ್ವನನ್ನು ವಶಕ್ಕೆ ಪಡೆದು, ಮೂವರು ಪರಾರಿಯಾದ ಘಟನೆ ನಡೆದಿದೆ.

ಜೂಜಾಟ ಆಟ ಆಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸುಬ್ರಹ್ಮಣ್ಯ ಠಾಣಾ ಎಸ್.ಐ ಸಿಬ್ಬಂದಿಯೊ0ದಿಗೆ ದಾಳಿ ನಡೆಸಿದ್ದಾರೆ.
ಈ ವೇಳೆ ಕಿರಣ್‌ನನ್ನು ವಶಕ್ಕೆ ಪಡೆದಿದ್ದು, ಆಡುತ್ತಿದ್ದ ಕುಮಾರ್ ಗಡಿಕಲ್ಲು, ಅವಿನ್ ಗಡಿಕಲ್ಲು, ಲಕ್ಷ್ಮಣ ಕಡೋಡಿ ಪರಾರಿಯಾಗಿದ್ದಾರೆ.
ಅದೃಷ್ಟದ ಆಟಕ್ಕೆ 1,350 ರೂ. ಹಾಗೂ ಲೂಡದ ದಾಳ-1, ರಟ್ಟಿನ ತುಂಡು -1 ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



