ಜನ ಮನದ ನಾಡಿ ಮಿಡಿತ

Advertisement

ಕಾರವಾರದಲ್ಲಿ ದೇಶದ ಅತಿ ದೊಡ್ಡ ಬಂಗುಡೆ ಮೀನು ಪತ್ತೆ!

 ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ಅಪರೂಪಕ್ಕೆ ವಿಶೇಷ ಮೀನುಗಳು ಸಿಗುವ ಮೂಲಕ ಅಚ್ಚರಿಯನ್ನು ಮೂಡಿಸುತ್ತವೆ.

ಈ ಬಾರಿ ಕಾರವಾರದ ಅರಬ್ಬಿ ಸಮುದ್ರದಲ್ಲಿ ದೇಶದಲ್ಲೇ ಮೊದಲ ಬಾರಿ ಎಂದು ಹೇಳಲಾಗುತ್ತಿರುವ ಅತಿ ಉದ್ದದ ಹಾಗೂ ಹೆಚ್ಚು ತೂಕದ ಬಂಗುಡೆ ಮೀನು ಮೀನುಗಾರರ ಬಲೆಗೆ ಬಿದ್ದಿದೆ.

ಕಾರವಾರದ ಬೈತಖೋಲ್ ಬಂದರಿನಲ್ಲಿ ನವೀನ್ ಹರಿಕಾಂತ್ರ ಎಂಬುವವರಿಗೆ ಆಳ ಸಮುದ್ರ ಬಿಡ್ಡಬಲೆ ದೋಣಿಗೆ ಈ ಮೀನು ಸಿಕ್ಕಿದೆ. ಈ ಮೀನನ್ನು ವಿನಾಯಕ್ ಖರೀದಿಸಿ ಕಡಲ ವಿಜ್ಞಾನ ವಿಭಾಗದ ಕೇಂದ್ರಕ್ಕೆ ನೀಡಿದ್ದಾರೆ. ಈ ಮೀನು 19 ಇಂಚು ಉದ್ದ ಮತ್ತು 4.5 ಇಂಚು ಅಗಲ ಇದ್ದು, ಒಂದು ಕೆಜಿ ತೂಕವಿದೆ.

ಬಂಗುಡೆ ಮೀನು ಎನ್ನುವುದು ಮೀನುಗಳ 30 ಜಾತಿಗಳನ್ನು ಒಳಗೊಂಡಿರುವಂತಹ ಸಾಮಾನ್ಯ ಪದವಾಗಿದೆ. ಇದರಲ್ಲಿ ಹೆಚ್ಚಿನವುಗಳು ಸ್ಕಾಂಬ್ರಿಡೇಗೆ ಸೇರಿರುವವು. ವಿಶ್ವದ ಹೆಚ್ಚಿನ ಭಾಗಗಳಲ್ಲಿ ಮಾರ್ಕೆಲ್ ಮೀನನ್ನು ಬಂಗುಡೆ ಎಂದು ಕರೆಯಲಾಗುತ್ತದೆ.

ಬಂಗುಡೆ ಮೀನು ಹೆಚ್ಚಾಗಿ ಕರಾವಳಿ ಭಾಗದಲ್ಲಿ ಕಂಡುಬರುವುದು. ಇದು ಅಲ್ಲಿಯೇ ಮೊಟ್ಟೆಯನ್ನಿಡುವುದು ಮತ್ತು ಬೆಳೆಯುವುದು. ಇವುಗಳು ಹೆಚ್ಚಾಗಿ ಉಷ್ಣವಲಯ ಹಾಗೂ ಸಮಶೀತೋಷ್ಣವಲಯಗಳಲ್ಲಿ ಕಂಡುಬರುತ್ತವೆ. ಬಂಗುಡೆ ಮೀನುಗಳು ದೊಡ್ಡ ಪ್ರಮಾಣದಲ್ಲಿ ಸಿಗುವ ಕಾರಣದಿಂದಾಗಿ ಇದು ಮೀನುಗಾರರಿಗೆ ದೊಡ್ಡ ಮಟ್ಟದಲ್ಲಿ ಹಣವನ್ನು ಸಂಪಾದಿಸಿ ಕೊಡುತ್ತದೆ. ಈ ಕಾರಣದಿಂದಾಗಿ ಬಂಗುಡೆ ಮೀನು ತುಂಬಾ ಜನಪ್ರಿಯವಾಗಿದೆ. ಇದು ಉತ್ತರ ಅಮೆರಿಕದ ಆಹಾರದ ಪ್ರಮುಖ ಭಾಗವಾಗಿದೆ. 20 ಸೆ.ಮೀ.ನಿಂದ 200 ಸೆ.ಮೀ. ತನಕ ಇರುವಂತಹ ಈ ಮೀನುಗಳು ದೈಹಿಕವಾಗಿ ಬೇರೆ ಬೇರೆ ವಿನ್ಯಾಸ ಹೊಂದಿರುವುದು. ಆದರ ಇದು ಒಂದೇ ರೀತಿಯ ರುಚಿ ಹಾಗೂ ಉತ್ತಮ ಪೋಷಕಾಂಶಗಳನ್ನು ಹೊಂದಿರುತ್ತವೆ.

ಈ ಮೀನು ಹೆಚ್ಚು ಎಂದರೆ 300 ಗ್ರಾಂವರೆಗೆ ತೂಕವಿರುತ್ತದೆ. ಗಂಡು ಬಂಗುಡೆ 36 ಸೆಂ.ಮೀ, ಹೆಣ್ಣು ಬಂಗುಡೆ 42 ಸೆಂ.ಮೀ ಅತೀ ದೊಡ್ಡದು ಎಂದು ಭಾರತದಲ್ಲಿ ವರದಿಯಾಗಿತ್ತು. ಆದರೆ ಕಾರವಾರದಲ್ಲಿ ಸಿಕ್ಕ ಈ ಬಂಗುಡೆ 48 ಸೆಂ.ಮೀ. ಇದೆ ಹಾಗಾಗಿ ಇದು ದೇಶದಲ್ಲೇ ಅತಿ ದೊಡ್ಡ ಮೀನಾಗಿರಬಹುದು ಎಂದು ಕಾರವಾರದ ಕಡಲ ಜೀವಶಾಸ್ತ್ರ ವಿಭಾಗದ ಶಿವಕುಮಾರ್ ಹರಿಗಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

Leave a Reply

Your email address will not be published. Required fields are marked *

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..!

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

error: Content is protected !!