ಜನ ಮನದ ನಾಡಿ ಮಿಡಿತ

Advertisement

ವಾಲ್ಪಾಡಿಯಲ್ಲಿ ‘ಕಂಡಡೊಂಜಿ ದಿನ’

ಮೂಡುಬಿದಿರೆ: ವಾಲ್ಪಾಡಿಯ ಗ್ರಾಮೋತ್ಸವ ಸಮಿತಿಯ ಆಶ್ರಯದಲ್ಲಿ ‘ಕಂಡಡೊಂಜಿ ದಿನ’ ಹಾಗೂ ಕಂಬಳ( ಟೈಮಿಂಗ್ಸ್) ವಾಲ್ಪಾಡಿ ಹೊಸಮನೆ ಶಶಧರ ದೇವಾಡಿಗರವರ ಗದ್ದೆಯಲ್ಲಿ ನಡೆಯಿತು. ಶಶಿಧರ ದೇವಾಡಿಗ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ‘ಇಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಲು ಇಂತಹ ಕಾರ್ಯಕ್ರಮಗಳು ಅಗತ್ಯವಿದ್ದು, ವರ್ಷದಲ್ಲೊಮ್ಮೆಯಾದರೂ ಕೆಸರಿನ ಗದ್ದೆಯಲ್ಲಿ ಕಳೆದು ಕುಷಿ ಪಡಬೇಕೆಂದು” ಹೇಳಿದರು.

ಸಮಿತಿ ಅಧ್ಯಕ್ಷ ಆನಂದ ಅವರು ಅಧ್ಯಕ್ಷತೆ ವಹಿಸಿದ್ದರು. ವಾಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯ ಅರುಣ್ ಕುಮಾರ್ ಶೆಟ್ಟಿ, ಸ್ಥಳೀಯರಾದ ರಾಜು ಶೆಟ್ಟಿ, ಸುಧಾಕರ ಶೆಟ್ಟಿ, ಸಿರಾಜುದ್ದೀನ್,ಶರೀಫ್, ವಿಘ್ನೇಶ್ ಆಚಾರ್ಯ ,ಸುಧಾಕರ ಸುವರ್ಣ,ಶಂಕರ ವಾಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು. ಸಂಜೆ ಟೈಮಿಂಗ್ಸ್ ಕಂಬಳ ನಡೆದಿದ್ದು 6 ಜತೆ ಕೋಣಗಳು ಭಾಗವಹಿಸಿತ್ತು. ಕಂಬಳ ಕ್ಷೇತ್ರದ ವಾಲ್ಪಾಡಿ ಹಾಲಾಜೆ ಲೂವಿಸ್ ಸಲ್ದಾನ್ಹ,ಇರುವೈಲು ಪಾಣಿಲ ಸತೀಶ್ ಸಾಲ್ಯಾನ್, ಹೊಸ್ಮಾರು ಸೂರ್ಯ ಸುರೇಶ್ ಶೆಟ್ಟಿ, ಅಳಿಯೂರು ಮಿತ್ತೊಟ್ಟು ಸೀತಾರಾಮ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.ಕಂಬಳದಲ್ಲಿ ಮೂಡುಕೊಣಾಜೆ ಏರೋಡಿಬೆಟ್ಟ ಯುವ ಬಾಂದವೆರ್ ಪ್ರಥಮ, ವಾಲ್ಪಾಡಿ ಹಾಲಾಜೆ ಲೂವಿಸ್ ಲಾರೆನ್ಸ್ ಡಿಸೋಜ ಅವರ ಕೋಣಗಳು ದ್ವಿತೀಯ ಸ್ಥಾನ ಪಡೆಯಿತು. ಕಂಡಡೊಂಜಿ ದಿನ ಯಶಸ್ಸಿಗೆ ಸಹಕರಿಸಿದ ಗೋಪಾಲ ವಾಲ್ಪಾಡಿ ಹಾಗೂ ಕಂಬಳ ಯಶಸ್ಸಿಗೆ ಸಹಕರಿಸಿದ ಶಂಕರ ವಾಲ್ಪಾಡಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಮಿತಿಯ ಪದಾಧಿಕಾರಿಗಳಾದ ಮೋಹಿನಿ, ಸುಕನ್ಯ, ದಿವ್ಯ, ರಕ್ಷಿತಾ, ಸುಜಾತ, ಜನಾರ್ದನ, ಇರ್ಷಾದ್,ಶೇಖರ್ ನಾರಾಯಣ, ಸುಮಿತ್, ಅಖಿಲೇಶ್, ಆಕಾಶ್, ಆನಂದ ಮಿತ್ತೊಟ್ಟು, ಸುಜಿತ್, ಮಂಜುನಾಥ, ಜ್ಯೋತಿ, ರವಿಚಂದ್ರ, ಸಂದೀಪ್, ಸುಕುಮಾರ್ ಶೇಖರ್, ಗೀತಾ, ಸುರೇಖ, ಶ್ವೇತಾ, ಚಂಪಾವತಿ, ಸಿದ್ದು, ರಮೇಶ್ ಮತ್ತಿತರರು ಉಪಸ್ಥಿತರಿದ್ದರು. ಅಶ್ರಫ್ ವಾಲ್ಪಾಡಿ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..!

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

error: Content is protected !!