ನಾನು ಇಸ್ರೋ ವಿಜ್ಞಾನಿ, ಚಂದ್ರಯಾನ-3ರ ಲ್ಯಾಂಡರ್ ವಿನ್ಯಾಸ ಮಾಡಿದ್ದು ನಾನೇ ಅಂತಾ ಸುಳ್ಳು ಹೇಳ್ಕೊಂಡು ಸಂದರ್ಶನ ಕೊಡ್ತಿದ್ದ 40 ವರ್ಷದ ವ್ಯಕ್ತಿಯನ್ನು ಗುಜರಾತ್‌ನ ಸೂರತ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಈ ಆರೋಪಕ್ಕೆ ಸಂಬಂಧಿಸಿದಂತೆ ಮೆಹುಲ್ ತ್ರಿವೇದಿ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇಸ್ರೋದ ಪುರಾತನ ವಿಜ್ಞಾನ ಅಪ್ಲಿಕೇಶನ್ ಇಲಾಖೆಯಲ್ಲಿ ಸಹಾಯಕ ಮುಖ್ಯಸ್ಥರಾಗಿರುವುದಾಗಿ ನಕಲಿ ನೇಮಕಾತಿ ಪತ್ರವನ್ನೂ ಈತ ಹೊಂದಿದ್ದ. ನನ್ನ ಟ್ಯೂಷನ್ ತರಗತಿಯನ್ನು ಜನಪ್ರಿಯಗೊಳಿಸಲು ಪ್ರಚಾರಕ್ಕಾಗಿ ವಿಜ್ಞಾನಿ ಅಂತಾ ಸುಳ್ಳು ಹೇಳಿದ್ದಾಗಿ ಪೊಲೀಸರ ಮುಂದೆ ತ್ರಿವೇದಿ ಬಾಯ್ಬಿಟ್ಟಿದ್ದಾನೆ.
ಅಂದ್ಹಾಗೆ ಭಾರತದ ಚಂದ್ರಯಾನ-3 ಜುಲೈ 14 ರಂದು ಉಡಾವಣೆಗೊಂಡಿತ್ತು. ಅದು ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಆಗಿದೆ. ಸಾಫ್ಟ್ ಲ್ಯಾಂಡ್ ಬೆನ್ನಲ್ಲೇ, ಇಸ್ರೋ ವಿಜ್ಞಾನಿಗಳು ಚಂದ್ರನ ಕುರಿತು ಅಧ್ಯಯನ ನಡೆಸುತ್ತಿದ್ದಾರೆ. ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಮಾಡಿದ ಏಕೈಕ ದೇಶ ಭಾರತವಾಗಿದ್ದು, ಇಡೀ ವಿಶ್ವವೇ ಕೊಂಡಾಡುತ್ತಿದೆ. ವಿಜ್ಞಾನಿಗಳ ಈ ಶ್ರಮದ ಕ್ರೆಡಿಟ್ ತೆಗೆದುಕೊಳ್ಳಲು ಹೊರಟಿದ್ದ ಆರೋಪಿ ಕೊನೆಗೂ ಲಾಕ್ ಆಗಿದ್ದಾನೆ.
ಮಂಗಳೂರು: ಇತ್ತೀಚೆಗೆ ನಿಧನ ಹೊಂದಿದ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಕೋಶಾಧಿಕಾರಿ ಹಾಗೂ ಯೂನಿಯನ್ ಬ್ಯಾಂಕಿನ ನಿವೃತ್ತ…
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ‍್ಯರ‍್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…