ಜನ ಮನದ ನಾಡಿ ಮಿಡಿತ

Advertisement

ಇಸ್ರೋದಿಂದ ಇಂದು ಬೆಳಗ್ಗೆ ಪ್ರಗ್ಯಾನ್ ತೆಗೆದ ಫೋಟೋ ಬಿಡುಗಡೆ

ಚಂದ್ರಯಾನ-3 ಮಿಷನ್ ಸಂಪೂರ್ಣವಾಗಿ ಇಸ್ರೋ ವಿಜ್ಞಾನಿಗಳು ಅಂದುಕೊಂಡಂತೆ ನಡೆಯುತ್ತಿದೆ. ವಿಕ್ರಮ್ ಲ್ಯಾಂಡರ್ ಸೇಫ್ ಆಗಿ ಲ್ಯಾಂಡ್‌ ಆಗಿದಾಯ್ತು. ಲ್ಯಾಂಡರ್‌ನಿಂದ ಕೆಳಗಿಳಿದ ಪ್ರಗ್ಯಾನ್ ರೋವರ್ ಸಾರಾಗವಾಗಿ ತನ್ನ ಕೆಲಸವನ್ನು ಆರಂಭಿಸಿದೆ. ಪ್ರಗ್ಯಾನ್ ರೋವರ್ ಜೊತೆ ನಿರಂತರ ಸಂಪರ್ಕದಲ್ಲಿರುವ ಇಸ್ರೋ ವಿಜ್ಞಾನಿಗಳು ಕ್ಷಣ, ಕ್ಷಣದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಇಂದು ಚಂದ್ರಯಾನ-3 ಮಿಷನ್‌ನಲ್ಲಿ ಪ್ರಗ್ಯಾನ್ ರೋವರ್ ತೆಗೆದ ಅಪರೂಪದ ಫೋಟೋವೊಂದನ್ನು ಇಸ್ರೋ ಶೇರ್ ಮಾಡಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿರುವ ಪ್ರಗ್ಯಾನ್ ರೋವರ್ ಬಹಳಷ್ಟು ಸಕ್ರಿಯವಾಗಿದೆ. ಇಂದು ಬೆಳಗ್ಗೆ ಪ್ರಗ್ಯಾನ್ ರೋವರ್ ಸ್ಮೈಲ್ ಪ್ಲೀಸ್ ಅಂತಾ ವಿಕ್ರಮ್ ಲ್ಯಾಂಡರ್‌ನ ಫೋಟೋವೊಂದನ್ನ ಕ್ಲಿಕ್ಕಿಸಿದೆ. ಪ್ರಗ್ಯಾನ್ ರೋವರ್‌ನಲ್ಲಿರುವ ನೇವಿಗೇಶನ್ ಕ್ಯಾಮೆರಾದಿಂದ ತೆಗೆದ ಪೋಟೋ ಇದಾಗಿದ್ದು, ಇಸ್ರೋಗೆ ರವಾನೆ ಮಾಡಿದೆ.

ಲ್ಯಾಬೋರೇಟರಿ ಫಾರ್ ಎಲೆಕ್ಟ್ರೋ ಆಪ್ಟಿಕ್ಸ್ ಸಿಸ್ಟಮ್ಸ್‌ನಿಂದ ಈ ನೇವಿಗೇಶನ್ ಕ್ಯಾಮೆರಾವನ್ನು ಅಭಿವೃದ್ಧಿ ಮಾಡಲಾಗಿದೆ. ಪ್ರಗ್ಯಾನ್ ರೋವರ್ ಕಣ್ಣಿನಲ್ಲಿ ಕಂಡ ವಿಕ್ರಮ್ ಲ್ಯಾಂಡರ್ ಪೋಟೋವನ್ನು ಇಸ್ರೋ ಇಂದು ಬಿಡುಗಡೆ ಮಾಡಿದೆ.

ಚಂದ್ರನ ಮೇಲ್ಮೈ ಮೇಲೆ ಸಂಶೋಧನೆಗಿಳಿದಿರೋ ಪ್ರಗ್ಯಾನ್​ ರೋವರ್​ಗೆ ಇನ್ನು 9 ದಿನಗಳು ಮಾತ್ರ ಕಾಲಾವಕಾಶ ಇದೆ. 9 ದಿನಗಳ ಬಳಿಕ ಚಂದ್ರನಲ್ಲಿ ಕತ್ತಲು ಆವರಿಸೋದ್ರಿಂದ ಪ್ರಗ್ಯಾನ್ ರೋವರ್ ಸಂಶೋಧನೆಗೆ ಬ್ರೇಕ್​ ಬೀಳುವ ಸಾಧ್ಯತೆ ಇದೆ. ವಿಕ್ರಮ್​ ಲ್ಯಾಂಡರ್​ ಹಾಗೂ ಪ್ರಗ್ಯಾನ್​ ರೋವರ್​ ಕಾರ್ಯ ನಿರ್ವಹಿಸಲು ಸೂರ್ಯನ ಬೆಳಕು ಅತಿ ಮುಖ್ಯವಾಗಿದೆ. ಸೋಲಾರ್​ ಪ್ಲೇಟ್​ಗಳ ಸಹಾಯದಿಂದಲೇ ವಿಕ್ರಮ್​ ಮತ್ತು ಪ್ರಗ್ಯಾನ್​ ಕಾರ್ಯನಿರ್ವಹಿಸುತ್ತಿದೆ. ಮುಂದಿನ 9 ದಿನಗಳವರೆಗೆ ಮಾತ್ರ ಇದು ಸಾಧ್ಯವಾಗಲಿದೆ. ಬಳಿಕ ಚಂದ್ರನಲ್ಲಿ -200 ಡಿಗ್ರಿ ಸೆಲ್ಸಿಯಸ್​ಗಿಂತ ಕಡಿಮೆ ತಾಪಮಾನ ಉಂಟಾಗೋದ್ರಿಂದ ವಿಕ್ರಮ್​ ಮತ್ತು ಪ್ರಗ್ಯಾನ್​ ನಿಷ್ಕ್ರಿಯಗೊಳ್ಳಲಿದೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!