ಚಂದ್ರಯಾನ-3 ಮಿಷನ್ ಸಂಪೂರ್ಣವಾಗಿ ಇಸ್ರೋ ವಿಜ್ಞಾನಿಗಳು ಅಂದುಕೊಂಡಂತೆ ನಡೆಯುತ್ತಿದೆ. ವಿಕ್ರಮ್ ಲ್ಯಾಂಡರ್ ಸೇಫ್ ಆಗಿ ಲ್ಯಾಂಡ್ ಆಗಿದಾಯ್ತು. ಲ್ಯಾಂಡರ್‌ನಿಂದ ಕೆಳಗಿಳಿದ ಪ್ರಗ್ಯಾನ್ ರೋವರ್ ಸಾರಾಗವಾಗಿ ತನ್ನ ಕೆಲಸವನ್ನು ಆರಂಭಿಸಿದೆ. ಪ್ರಗ್ಯಾನ್ ರೋವರ್ ಜೊತೆ ನಿರಂತರ ಸಂಪರ್ಕದಲ್ಲಿರುವ ಇಸ್ರೋ ವಿಜ್ಞಾನಿಗಳು ಕ್ಷಣ, ಕ್ಷಣದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಇಂದು ಚಂದ್ರಯಾನ-3 ಮಿಷನ್‌ನಲ್ಲಿ ಪ್ರಗ್ಯಾನ್ ರೋವರ್ ತೆಗೆದ ಅಪರೂಪದ ಫೋಟೋವೊಂದನ್ನು ಇಸ್ರೋ ಶೇರ್ ಮಾಡಿದೆ.
ಚಂದ್ರನ ದಕ್ಷಿಣ ಧ್ರುವದಲ್ಲಿರುವ ಪ್ರಗ್ಯಾನ್ ರೋವರ್ ಬಹಳಷ್ಟು ಸಕ್ರಿಯವಾಗಿದೆ. ಇಂದು ಬೆಳಗ್ಗೆ ಪ್ರಗ್ಯಾನ್ ರೋವರ್ ಸ್ಮೈಲ್ ಪ್ಲೀಸ್ ಅಂತಾ ವಿಕ್ರಮ್ ಲ್ಯಾಂಡರ್‌ನ ಫೋಟೋವೊಂದನ್ನ ಕ್ಲಿಕ್ಕಿಸಿದೆ. ಪ್ರಗ್ಯಾನ್ ರೋವರ್‌ನಲ್ಲಿರುವ ನೇವಿಗೇಶನ್ ಕ್ಯಾಮೆರಾದಿಂದ ತೆಗೆದ ಪೋಟೋ ಇದಾಗಿದ್ದು, ಇಸ್ರೋಗೆ ರವಾನೆ ಮಾಡಿದೆ.
ಲ್ಯಾಬೋರೇಟರಿ ಫಾರ್ ಎಲೆಕ್ಟ್ರೋ ಆಪ್ಟಿಕ್ಸ್ ಸಿಸ್ಟಮ್ಸ್‌ನಿಂದ ಈ ನೇವಿಗೇಶನ್ ಕ್ಯಾಮೆರಾವನ್ನು ಅಭಿವೃದ್ಧಿ ಮಾಡಲಾಗಿದೆ. ಪ್ರಗ್ಯಾನ್ ರೋವರ್ ಕಣ್ಣಿನಲ್ಲಿ ಕಂಡ ವಿಕ್ರಮ್ ಲ್ಯಾಂಡರ್ ಪೋಟೋವನ್ನು ಇಸ್ರೋ ಇಂದು ಬಿಡುಗಡೆ ಮಾಡಿದೆ.
ಚಂದ್ರನ ಮೇಲ್ಮೈ ಮೇಲೆ ಸಂಶೋಧನೆಗಿಳಿದಿರೋ ಪ್ರಗ್ಯಾನ್ ರೋವರ್ಗೆ ಇನ್ನು 9 ದಿನಗಳು ಮಾತ್ರ ಕಾಲಾವಕಾಶ ಇದೆ. 9 ದಿನಗಳ ಬಳಿಕ ಚಂದ್ರನಲ್ಲಿ ಕತ್ತಲು ಆವರಿಸೋದ್ರಿಂದ ಪ್ರಗ್ಯಾನ್ ರೋವರ್ ಸಂಶೋಧನೆಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ಕಾರ್ಯ ನಿರ್ವಹಿಸಲು ಸೂರ್ಯನ ಬೆಳಕು ಅತಿ ಮುಖ್ಯವಾಗಿದೆ. ಸೋಲಾರ್ ಪ್ಲೇಟ್ಗಳ ಸಹಾಯದಿಂದಲೇ ವಿಕ್ರಮ್ ಮತ್ತು ಪ್ರಗ್ಯಾನ್ ಕಾರ್ಯನಿರ್ವಹಿಸುತ್ತಿದೆ. ಮುಂದಿನ 9 ದಿನಗಳವರೆಗೆ ಮಾತ್ರ ಇದು ಸಾಧ್ಯವಾಗಲಿದೆ. ಬಳಿಕ ಚಂದ್ರನಲ್ಲಿ -200 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ತಾಪಮಾನ ಉಂಟಾಗೋದ್ರಿಂದ ವಿಕ್ರಮ್ ಮತ್ತು ಪ್ರಗ್ಯಾನ್ ನಿಷ್ಕ್ರಿಯಗೊಳ್ಳಲಿದೆ.
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ‍್ಯರ‍್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…
ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಪೌಜಾನ್…