ಮಂಗಳೂರು; ಈ ವರ್ಷದ ಸಾರ್ವಜನಿಕ ಗಣೇಶೋತ್ಸವವು ಬಂಟರ ಯಾನೆ ನಾಡವರ ಮಾತೃ ಸಂಘದ ಓಂಕಾರ ನಗರದಲ್ಲಿ ಸಿದ್ಧಿವಿನಾಯಕ ಪ್ರತಿಷ್ಠಾನ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಎಲ್ಲಾ ಬಂಟರ ಸಂಘಗಳ ಸಹಭಾಗಿತ್ವದಲ್ಲಿ ನಡೆಯಲಿದೆ ಎಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಹಾಗೂ ಸಿದ್ಧಿ ವಿನಾಯಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದ್ದಾರೆ.

ಇವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾನಾಡಿ, ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ಹಾಗೂ ಪೂರ್ವಭಾವಿಯಾಗಿ ಅನೇಕ ಮಹತ್ವಪೂರ್ಣ ಕಾರ್ಯಕ್ರಮಗಳು ನಡೆಯಲಿವೆ. ಈ ಎಲ್ಲ ಕಾರ್ಯಕ್ರಮಗಳೂ ಬಂಟ್ಸ್ ಹಾಸ್ಟೆಲ್‌ನ ಓಂಕಾರ ನಗರದಲ್ಲಿ ನಡೆಯಲಿದ್ದು, ಸೆ.3ರ ಆದಿತ್ಯವಾರ ಬೆಳಿಗ್ಗೆ 9 ಗಂಟೆಯಿ0ದ ಇಡೀ ದಿನ “ಬಂಟ ಕಲಾ ಸಂಭ್ರಮ” ಜರಗಲಿದೆ. ಮೂರು ಜಿಲ್ಲೆಗಳ ಸುಮಾರು ಹದಿನೆಂಟು ಪ್ರಮುಖ ಕಂಡಗಳು ಭಾಗವಹಿಸಲಿದ್ದು, ಒಂದೊ0ದು ತಂಡದಲ್ಲಿ ಕನಿಷ್ಠ 25 ಕಲಾವಿದರು ಪಾಲ್ಗೊಳ್ಳಲಿದ್ದಾರೆ”.
ಭಾರತ ದರ್ಶನ ಹೆಸರಿನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಕರ್ಷಕವಾಗಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಮ್ಮ ದೇಶದ ಕಲೆ, ಜನಪದ, ಜನಜೀವನ ಹಾಗೂ ಸಂಸ್ಕೃತಿಯನ್ನು ಪುತಿಬಿಂಬಿಸುವ ಕಾರ್ಯಕ್ರಮಗಳು ಜರುಗಲಿದೆ ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು, ಈ ಸ್ಪರ್ಧೆಗಾಗಿ ಮೂರು ಜಿಲ್ಲೆಗಳ ವಿವಿಧ ತಂಡಗಳು ಈಗಾಗಲೇ ತಾಲೀಮು ನಡೆಸುತ್ತಿವೆ. ಸಪ್ಟೆಂಬರ್ 10ನೇ ತಾರೀಕಿನಂದು ಆದಿತ್ಯವಾರ ಬೆಳಿಗ್ಗೆ ಗಂಟೆ 8ರಿಂದ ಇಡೀ ದಿನ ಬಂಟ ಕ್ರೀಡಾ ಸ್ಪರ್ಧೆ ಜರಗಲಿವೆ. ಈ ಕ್ರೀಡಾ ಸ್ಪರ್ಧೆಯಲ್ಲಿ 3 ಜಿಲ್ಲೆಗಳ ಬಂಟ ಕ್ರೀಡಾ ಪಟುಗಳು ಹಾಗೂ ತಂಡಗಳು ಭಾಗವಹಿಸಲಿದೆ. ವಾಲಿಬಾಲ್, ಥಾಲ್, ಹಗ ಜಗ್ಗಾಟಗಳಲ್ಲದೇ ವಿವಿಧ ಕ್ರೀಡಾ ಸ್ಪರ್ಧೆಗಳು 3 ವರ್ಷದಿಂದ 90 ವರ್ಷದವರೆಗಿನ ವಯೋಮಾನದವರಿಗೆ ನಡೆಯಲಿದೆ ಎಂದು ಹೇಳಿದರು.

ಬಳಿಕ ಮಾತಾಡಿದ ಗಣೇಶೋತ್ಸವ ಸಮಿತಿಯ ಸಂಚಾಲಕ ಬಿ. ನಾಗರಾಜ ಶೆಟ್ಟಿ ಅವರು, “ಸೆ.18ರ ಸೋಮವಾರ ಮಧ್ಯಾಹ್ನ 3.30 ರಿಂದ ರಾಧಾಕೃಷ್ಣ ಮಂದಿರ(ಬಾಳ0 ಭಟ್ಟರ ಮನೆ)ದಿಂದ ಗಣೇಶನ ವಿಗ್ರಹವನ್ನು ವಿಶೇಷ ಮೆರವಣಿಗೆಯ ಮುಖಾಂತರ ಓಂಕಾರ ನಗರಕ್ಕೆ ತರಲಾಗುವುದು. ಸೆ.19ರ ಮಂಗಳವಾರ ಬೆಳಗ್ಗೆ 8 ಗಂಟೆಗೆ ಗಣೇಶನ ವಿಗ್ರಹ ಪ್ರತಿಷ್ಠಾಪನೆ ನೆರವೇರಲಿದ್ದು ಬೆಳಗ್ಗೆ 9 ಗಂಟೆಗೆ ವಿತರಣಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯ ಕ್ರಮದಲ್ಲಿ ಸಮಾಜದ ಹಿರಿಯರು ಧ್ವಜಾರೋಹಣಗೈದು ಕಾರ್ಯಕ್ರಮ ಉದ್ಘಾಟಿಸಿ ತನ ವಿತರಿಸಲಿದ್ದು, ಮಂಗಳೂರು ಸುತ್ತಮುತ್ತಲ ಎಲ್ಲ ಗ್ರಾಮಗಳ ಸಮಸ್ತರು ಆಗಮಿಸಿ ತನ ಪಡೆದುಕೊಂಡು ಹೋಗಬೇಕೆಂದು ವಿನಂತಿಸಿದರು. ಅಂದು ಸಂಜೆ 5.00 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದು ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಹಿರಿಯರನ್ನು ಸನ್ಮಾನಿಸಲಾಗುವುದು.

ಸೆ.20ರ ಬೆಳಗ್ಗೆ ಗಂಟೆ 9.30ರಿಂದ ಧಾರ್ಮಿಕ ಗೋಷ್ಠಿ ಹಾಗೂ ಧಾರ್ಮಿಕ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಧಾರ್ಮಿಕ ಗೋಷ್ಠಿಯಲ್ಲಿ ಮೂರು ಜಿಲ್ಲೆಗಳಲ್ಲಿ ಧಾರ್ಮಿಕ ವಿಧಿವಿಧಾನಗಳು, ಹಾಗೂ ದೇವಸ್ಥಾನ ಆಡಳಿತ ಶೈಲಿಯ ಬಗೆ, ಧಾರ್ಮಿಕ ಪಂಡಿತರು ವಿಚಾರ ಮಂಡಿಸಲಿದ್ದು, ಧಾರ್ಮಿಕ ಹಾಗೂ ಜನಪದ ಕ್ಷೇತ್ರದ ಹಿರಿಯರು ಸಮನ್ವಯಕಾರರಾಗಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದರು.
“ದಕ್ಷಿಣ ಕನ್ನಡ, ಉಡುಪಿ ಕಾಸರಗೋಡು ಜಿಲ್ಲೆಗಳ ವಿವಿಧ ಪ್ರಮುಖ ದೇವಸ್ಥಾನಗಳ ಬಂಟಿ ಆಡಳಿತ ಮೊಕ್ತಸರರು ಹಾಗೂ ಧಾರ್ಮಿಕ ದತ್ತಿ ಇಲಾಖೆಯ ವಿವಿಧ ದೇವಸ್ಥಾನಗಳ ವ್ಯವಸ್ಥಾಪನ ಸಮಿತಿಯ ಬಂಟ ಅಧ್ಯಕ್ಷರುಗಳನ್ನು ಸನ್ಮಾನಿಸಿ ಗೌರವಿಸಲಾಗುವುದು. ಸುಮಾರು 200 ಕ್ಕೂ ಮಿಕ್ಕಿ ಬಂಟ ಆಡಳಿತ ಮೊಕೇಸರರು ಮತ್ತು ವ್ಯವಸ್ಥಾಪನಾ ಸಮಿತಿ: ಅಧ್ಯಕ್ಷರ ಸನ್ಮಾನವನ್ನು ಹಮ್ಮಿಕೊಳ್ಳಲಾಗುವುದು, ಅದೇ ದಿನ ಸಂಜೆ ಗಂಟೆ 5.00 ರಿಂದ ಧಾರ್ಮಿಕ ಸಭೆ ನಡೆಯಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದ ಬಂಟ ಹಿರಿಯರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸೆ.21ನೇ ತಾರೀಕಿನಂದು ಬೆಳಗ್ಗೆಯಿಂದ ಸಹಸ್ರ ನಾರಿಕೇಳ ಗಣಯಾಗ ನಡೆಯಲಿದ್ದು ಮುಂಚಿತವಾಗಿ ಗಣಯಾಗಕ್ಕೆ ಹೆಸರು ನೋಂದಾಯಿಸಿದವರಿಗೆ ಈ ಗಣ ಯಾಗದಲ್ಲಿ ಭಾಗವಹಿಸುವ ಅವಕಾಶವಿದೆ. ಅದೇ ದಿನ ಸಂಜೆ ಸಾಮೂಹಿಕ ರಂಗಪೂಜೆ ಜರಗಲಿದ್ದು, ರಂಗಪೂಜೆಯಲ್ಲಿ ಮುಂಚಿತವಾಗಿ ಹೆಸರು ನೋಂದಾಯಿಸಿದವರಲ್ಲರಿಗೂ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ಸೆ.21ರ ಮಧ್ಯಾಹ್ನ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಜರಗಲಿದ್ದು, ಸಾರ್ವಜನಿಕರು ಪ್ರಸಾದ ಸ್ವೀಕರಿಸಬೇಕೆಂದು ವಿನಂತಿಸಿದರು. ಸಂಜೆ 4 ಗಂಟೆಗೆ ಗಣೇಶ ವಿಗ್ರಹ ವಿಸರ್ಜನಾ ಮೆರವಣಿಗೆ ಸಮಾಜದ ಹಿರಿಯರು ಚಾಲನೆ ನೀಡಲಿದ್ದು, ವೈಭವದ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಮೆರವಣಿಗೆ ವಠಾರದ ಪ್ರಮುಖ ಬೀದಿಗಳಲ್ಲಿ ಸಾಗಲಿದ್ದು ಮೆರವಣಿಗೆಯಲ್ಲಿ ಕರಾವಳಿಯ ಪ್ರಮುಖ ಭಜನಾ ತಂಡಗಳು ಭಾಗವಹಿಸಲಿವೆ. ಈ ವೈಭವದ ಆಕರ್ಷಕ ಮೆರವಣಿಗೆಯಲ್ಲಿ ಸಮಾಜ ಬಾಂಧವರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.
ಇನ್ನೂ ಈ ಸುದ್ದಿಗೋಷ್ಠಿಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಪ್ರಧಾನ ಕಾರ್ಯದರ್ಶಿ ಕೆ.ಎಂ. ಶೆಟ್ಟಿ, ಸಿಎ, ಕೋಶಾಧಿಕಾರಿ ರಾಮ್ ಮೋಹನ್ ರೈ, ಜೊತೆ ಕಾರ್ಯದರ್ಶಿ ಸಂಜೀವ ಶೆಟ್ಟಿ ಸಂಪಿಗೇಡಿ, ಸಿದ್ಧಿವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ರವಿರಾಜ್ ಶೆಟ್ಟಿ, ಕೃಷ್ಣ ಪ್ರಸಾದ್ ರ ಬೆಳ್ಳಿಪ್ಪಾಡಿ, ಡಾ.ಆಶಾಜ್ಯೋತಿ ರೈ, ಉದಯ ಕುಮಾರ್ ಶೆಟ್ಟಿ, ಸಂಜೀವ ಶೆಟ್ಟಿ, ಸುಧಾಕರ ಪೂಂಜ, ಪ್ರೇಮಾನಂದ ಶೆಟ್ಟಿ, ಸಿಎ. ಸುದೇಶ್ ರೈ, ಭಾರತಿ ಜಿ.ಶೆಟ್ಟಿ, ಅರುಣಾ ಶೆಟ್ಟಿ ಹಾಗೂ ವಿವಿಧ ಉಪಸಮಿತಿಯ ಸಂಚಾಲಕರು ಉಪಸ್ಥಿತರಿದ್ದರು.



