ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಬಾಯತ್ಯಾರು ಎಂಬಲ್ಲಿ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಟ್ವಿಸ್ಟ್ ಸಿಕ್ಕಿದ್ದು, ಆತ ಲೋನ್ ಆಪ್‌ನಿಂದ ಪಡೆದುಕೊಂಡ ಹಣದಿಂದ ಕಂಪನಿಯ ಬ್ಲಾಕ್ ಮೇಲ್ ಬೆದರಿಕೆಗೆ ಹೆದರಿ ಪ್ರಾಣ ಬಿಟ್ಟಿದ್ದಾನೆ.
ಪುದುವೆಟ್ಟುವಿನ ಸ್ವರಾಜ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ.
ಸ್ವರಾಜ್ ಆನ್ ಲೈನ್ ಲೋನ್ ಆಪ್ ಕಂಪನಿಯಿಂದ ಲೋನ್ ಪಡೆದಿದ್ದು, ಹಂತಹಂತವಾಗಿ ಕಂಪನಿ ಹೆಚ್ಚುವರಿ ಹಣ ವಾಪಸ್ ಪಡೆಯಲು ಬೆದರಿಕೆಗಳನ್ನು ಹಾಕುತ್ತಿತ್ತು. ಸ್ವರಾಜ್ ವಾಟ್ಸಪ್ ನಲ್ಲಿ ಅಕ್ಕನ ಮಗಳ ಡಿಪಿ ಫೋಟೋ ಹಾಕಿದ್ದ. ಇದನ್ನೇ ಬಂಡವಾಳ ಮಾಡಿಕೊಂಡ ಆಪ್ ಕಂಪನಿ ವಿದೇಶದ ವಾಟ್ಸಪ್ ನಂಬರಿನಿಂದ ಸ್ನೇಹಿತರಿಗೆ ‘ಮಗು ಮಾರಾಟಕ್ಕಿದೆ’ ಎಂದು ಬರೆದು ವಿದೇಶಿ ನಂಬರ್ ಹಾಕಿ ಸ್ವರಾಜ್ ಸ್ನೇಹಿತರಿಗೆ ಕೆಲ ದಿನಗಳ ಹಿಂದೆ ಶೇರ್ ಮಾಡಿದ್ದರು.ಇನ್ನು ಈ ವಿಷಯವನ್ನು ಸ್ಬರಾಜ್ ಗೆ ಸ್ನೇಹಿತರು ತಿಳಿಸಿದ್ದು, ಆಗಸ್ಟ್ 30 ಕ್ಕೆ ಸ್ವರಾಜ್ ತನ್ನ ಬ್ಯಾಂಕ್ ಖಾತೆಯಿಂದ 30,000 ಸಾವಿರ ಹಣ ಡ್ರಾ ಮಾಡಿ ಆಪ್ ಕಂಪನಿಗೆ ಕಟ್ಟಿದ್ದ. ಮತ್ತೆ ಹೆಚ್ಚುವರಿ ಹಣ ನೀಡಲು ಆಪ್ ಕಂಪನಿ ಬೆದರಿಕೆ ಹಾಕುತ್ತಿತ್ತು. ಅದಲ್ಲದೆ ಆಗಸ್ಟ್ 31 ರ ಮಧ್ಯಾಹ್ನ 2 ಗಂಟೆಗೆ ಕೊನೆಯ ಡೆಡ್ ಲೈನ್ ನಿನಗೆ ಎಂದು ಕಂಪನಿ ಸಂದೇಶ ಕಳುಹಿಸಿತ್ತು ಎನ್ನಲಾಗಿದೆ.ಈ ಎಲ್ಲಾ ವಿಚಾರದಿಂದ ನೊಂದಿದ್ದ ಸ್ಬರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿ ಕಾರ್ಯಾಚರಣೆ ನಡೆಸಿ ಅರಬ್ಬಿ ಸಮುದ್ರದಲ್ಲಿ…
ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನಲ್ಲಿ ಇಂದು ಮಧ್ಯಾಹ್ನ ಕೋಕರ್ ಹೈಡ್ರೋ ಟ್ರೀಟರ್ ಘಟಕದಲ್ಲಿ ಘಟನೆ ಸಂಭವಿಸಿದ್ದು, ಘಟನಾ…
ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲು ಪ್ರದೇಶವನ್ನು ಅ.1ರ ಮಧ್ಯರಾತ್ರಿಯಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ವಿಭಾಗೀಯ…
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಲೆಗಳ ಆರಂಭದ ಸಮಯದಲ್ಲಿ ಬದಲಾವಣೆ…
ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ ಏಕ ಜಾತಿ ಧರ್ಮ ಪೀಠದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಪಂಚಾಶತ್…
ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗೆ ಅವಧಿ ಮೀರಿದ ಮಾತ್ರೆಗಳನ್ನು ವಿತರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಆಸ್ಪತ್ರೆ ಆಡಳಿತ…