ಐದು ತಿಂಗಳ ಹಸುಗೂಸಿಗೆ ಮಲತಾಯಿ ಹಾಲಿನಲ್ಲಿ ವಿಷ ಬೆರೆಸಿ ಸಾಯಿಸಿರೋ ಆರೋಪ ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಬಬಲಾದ ಗ್ರಾಮದಲ್ಲಿ ನಡೆದಿದೆ.
ಸಂಗೀತಾ ಚೆಟ್ಟಿಗೇರಿ ಸಾವನ್ನಪ್ಪಿದ ಐದು ತಿಂಗಳ ಹಸುಕೂಸು.
ಮನೆಯಲ್ಲಿ ಹಸುಗೂಸು ಸಂಗೀತಾಳಿಗೆ ತಾಯಿ ಶ್ರೀದೇವಿ ಹಾಲು ಕುಡಿಸುತ್ತಾ ಇರ್ತಾರೆ. ಆಗ ಒತ್ತಾಯ ಪೂರ್ವಕವಾಗಿ ಆರೋಪಿ ದೇವಮ್ಮ ಹಾಲುಣಿಸುತ್ತೇನೆ ಅಂತಾ ಕರೆದುಕೊಂಡು ಹೋಗಿದ್ದಾರೆ. ಮನೆಯ ರೂಮಿಗೆ ಹೋಗಿ ಡೋರ್ ಮುಚ್ಚಿಕೊಂಡಿದ್ದಾರೆ. ಆಗ ಹಾಲಿನ ಬಾಟಲ್‌ನಲ್ಲಿ ವಿಷ ಬೆರೆಸಿ ಕೂಸಿಗೆ ಹಾಲು ಕೂಡಿಸಿದ್ದಾರೆ ಎನ್ನಲಾಗಿದೆ.ವಿಷ ಬೆರೆಸಿದ ಹಾಲು ಕುಡಿದ ಮೂರು ಗಂಟೆ ನಂತರ ಹಸುಗೂಸಿನ ಬಾಯಲ್ಲಿ ನೊರೆ ಬಂದಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಂಗೀತಾ ಚೆಟ್ಟಿಗೇರಿ ಸಾವನ್ನಪ್ಪಿದ್ದಾಳೆ. ಕಳೆದ ಆಗಸ್ಟ್ 30ರಂದು ಬಬಲಾದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿ ದೇವಮ್ಮಳನ್ನು ವಡಗೇರಾ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಬಬಲಾದ ಗ್ರಾಮದ ಸಿದ್ದಪ್ಪ ಚೆಟ್ಟಿಗೇರಿ 11 ವರ್ಷಗಳ ಹಿಂದೆ ಶ್ರೀದೇವಿ ಎಂಬಾಕೆಯನ್ನು ಮದುವೆಯಾಗಿದ್ದ. ಶ್ರೀದೇವಿಗೆ ಮಕ್ಕಳಾಗದ ಹಿನ್ನೆಲೆ ಕಳೆದ 7 ವರ್ಷದ ಹಿಂದೆ ದೇವಮ್ಮಳನ್ನು ಮದುವೆಯಾಗಿದ್ದಾನೆ. ದೇವಮ್ಮಳನ್ನ ಮದುವೆಯಾದ ನಂತರ ಶ್ರೀದೇವಿ ಗಂಡನ ಮನೆ ಬಿಟ್ಟು ತನ್ನ ತವರು ಮನೆಗೆ ಹೋಗಿದ್ದಾಳೆ. ಹಿರಿಯರ ರಾಜಿ ಸಂಧಾನದ ನಂತರ ಕಳೆದ ಮೂರು ವರ್ಷಗಳ ಹಿಂದೆ ಗಂಡನ ಮನೆಗೆ ವಾಪಸ್ ಆಗಿದ್ದಳು. ಕಳೆದ ಐದು ತಿಂಗಳ ಹಿಂದೆ ಶ್ರೀದೇವಿಗೆ ಹೆಣ್ಣು ಮಗು ಜನಿಸಿದೆ. ಆರೋಪಿ ದೇವಮ್ಮಳಿಗೆ ನಾಲ್ಕು ಜನ ಮಕ್ಕಳಿದ್ದಾರೆ. ಹೀಗಾಗಿ ಆಸ್ತಿಯಲ್ಲಿ ಸವತಿ ಶ್ರೀದೇವಿ ಐದು ತಿಂಗಳ ಮಗಳು ಸಂಗೀತಾಗೆ ಪಾಲು ಹೋಗುತ್ತೆ ಅಂತಾ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…