ಮುಲ್ಕಿ: ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುಗಳ 169ನೇ ಜನ್ಮ ದಿನಾಚರಣೆ ಅಂಗವಾಗಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ ಪ್ರಕಾಶ್ ಸುವರ್ಣ ವಹಿಸಿದ್ದರು.
ಮುಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ರವರು ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿ
ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ರವರು ಉನ್ನತ ಶಿಕ್ಷಣ ವಿದ್ಯಾರ್ಥಿ ವೇತನ ವಿತರಿಸಿದರು ಉದ್ಯಮಿ ಅಶೋಕ್ ಟೈಲರ್‍ಸ್ ನ ಮಾಲಕ ಶಶಿಧರ್ ಕೋಟ್ಯಾನ್ ರವರು ಎನ್ ಆರ್ ಮುಲ್ಕಿ ಸ್ಮರಣಾರ್ಥ ವಿದ್ಯಾ ನಿದಿ ಪ್ರಶಸ್ತಿ ಪ್ರಧಾನ ಮಾಡಿದರು.

ಮುಲ್ಕಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ವಾಸುದೇವ ಬೆಳ್ಳೆಯವರು ಬ್ರಹ್ಮ ಶ್ರೀ ನಾರಾಯಣ ಗುರುಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ವಿಧಾನ ಪರಿಷತ್ ಸದಸ್ಯರುಗಳಾದ ಕೋಟ ಶ್ರೀನಿವಾಸ ಪೂಜಾರಿ, ಮೂಲ್ಕಿ ನಗರ ಪಂಚಾಯತ್ ಸದಸ್ಯ ಹರ್ಷರಾಜ್ ಶೆಟ್ಟಿ ಜಿ.ಎಂ, ಮುಲ್ಕಿ ಬಿಲ್ಲವ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ, ಜಯಕುಮಾರ್ ಕುಬೆವೂರು, ಕೋಶಾಧಿಕಾರಿ ಕಮಲಾಕ್ಷ ಬಡಗಿತ್ಲು, ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮತ್ತಿತರರು ಆಗಮಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬಿಲ್ಲವ ಸಂಘದ ವ್ಯಾಪ್ತಿಯ ಸಮಾಜದ ಪ್ರತಿಭಾವಂತ ವಿದ್ಯಾಥಿಗಳಗೆ ಗೌರವಾರ್ಪಣೆ ,ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಮಧ್ಯಾಹ್ನ ೩ ಗಂಟೆಗೆ ಬ್ರಹ್ಮ ಶ್ರೀ ನಾರಾಯಣಗುರುಗಳ ಭಾವಚಿತ್ರದ ಶೋಭಾಯಾತ್ರೆಯು ಕೊಳಚಿಕಂಬಳ ಗ್ರಾಮಸ್ಥರ ಕೂಡುವಿಕೆಯೊಂದಿಗೆ ಶ್ರೀಮತಿ ಶಾಂತ ಸಹದೇವ ಕರ್ಕೇರರ ನಿವಾಸ ಸಾಯಿ ಪಾದ ಕೊಳಚಿಕಂಬಳ ದಲ್ಲಿ ಗುರುಪೂಜೆಯಾಗಿ ಕಟ್ಟದಂಗಡಿ- ಒಡೆಯರಬೆಟ್ಟು- ಹೊಸಪೇಟೆ- ಬಪ್ಪನಾಡು ದೇವಸ್ಥಾನ- ಪಂಚಮಹಲ್ ಕೆನರಾ ಬ್ಯಾಂಕ್ ರಸ್ತೆ-ಮೂಲ್ಕಿ ಬಸ್ ನಿಲ್ದಾಣವಾಗಿ ಸಂಘವನ್ನು ತಲುಪಿ ಮಹಾ ಪೂಜೆಯಾಗಿ ಪ್ರಸಾದ ವಿತರಣೆ ,ಅನ್ನ ಪ್ರಸಾದ ನಡೆಯಲಿದೆಯೆಂದು ಪ್ರಕಟಣೆ ತಿಳಿಸಿದೆ.



