ವಿಪರೀತ ಮದ್ಯದ ನಶೆಯಲ್ಲಿ ಪುತ್ರರು ತಮ್ಮ ತಾಯಿಯನ್ನೇ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದು, ನೊಂದ ತಾಯಿ ಆತ್ಮಹತ್ಯೆಗೆ ಶರಣಾದ ಘಟನೆ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಲಿಂಗಪ್ಪಯ್ಯ ಕಾಡುಕೊರಂಟಬೆಟ್ಟು ಕಾಲೋನಿಯಲ್ಲಿ ನಡೆದಿದೆ. ಸುಮಿತ್ರ (44) ಆತ್ಮಹತ್ಯೆ ಮಾಡಿಕೊಂಡವರು. ಮಕ್ಕಳಾದ ಮಂಜುನಾಥ (25), ಪ್ರಹ್ಲಾದ ಯಾನೆ ಪ್ರಭು (19), ಸಂಜೀವ(22) ಆರೋಪಿಗಳು. ಮಕ್ಕಳು ಮಧ್ಯದ ನಶೆಯಲ್ಲಿ ಜಗಳ ಮಾಡಿಕೊಂಡಿದ್ದಾರೆ. ಈ ಸಂದರ್ಭ ತಾಯಿ ನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.



