ಖಾಸಗಿ ಬಸ್ಸಿನಿಂದ ಹೊರಗೆಸೆಯಲ್ಪಟ್ಟು ಕಂಡಕ್ಟರ್ಮೃತಪಟ್ಟ ಮತ್ತು ಇತರ ಖಾಸಗಿ ಬಸ್ ವಿಚಾರವಾಗಿ ನಂತೂರ್ ವೃತ್ತದ ಬಳಿ ಬಸ್ಸು ಮಾಲಕರು ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಜಾಗೃತಿ ಮೂಡಿಸಿದರು. ಈ ಕುರಿತಂತೆ ಮಾಹಿತಿ ಇರುವ ಪ್ರತಿಗಳನ್ನು ಬಸ್ಸು ನಿರ್ವಾಕರಿಗೆ ನೀಡಿ ಮನವರಿಕೆ ಮಾಡಲಾಯಿತು. ನಿರ್ವಾಹಕ ಸಹಿತ ಯಾರೂ ಬಸ್ಸಿನ ಫುಟ್‌ಬೋರ್ಡ್‌ನಲ್ಲಿ ನಿಲ್ಲುವಂತಿಲ್ಲ. ಪ್ರತಿಯೊಬ್ಬರಿಗೂ ಟಿಕೆಟ್ ನೀಡಬೇಕು ಎಂದು ಮನವರಿಕೆ ಮಾಡಲಾಯಿತು.







