
ಕನ್ಯಾನ ಸದಾಶಿವ ಶೆಟ್ಟಿ ಅವರ ಮುಂದಾಳತ್ವದಲ್ಲಿ, ಶ್ರೀಮತಿ ಡಾ. ಮಮತಾ ಪಿ. ಶೆಟ್ಟಿ ಅವರ ಸಾರಥ್ಯದಲ್ಲಿ ಹೊಸ ಚೇತನದೊಂದಿಗೆ ಅಭಿಮತ ಹೊಸದೊಂದು ಮೈಲುಗಲ್ಲನ್ನು ಸೃಷ್ಟಿಸುವುದಕ್ಕೆ ದಾಪುಗಾಲಿಡುತ್ತಿದೆ. ಐದು ವರ್ಷಗಳ ಸುದೀರ್ಘ ಪಯಣದ ಸಂಭ್ರಮದ ವಾತಾವರಣದಲ್ಲಿ ಸುಸಜ್ಜಿತ ನೂತನ ಕೇಂದ್ರ ಕಛೇರಿಯ ಉದ್ಘಾಟನಾ ಸಮಾರಂಭ ಇಂದು ಅದ್ದೂರಿಯಾಗಿ ನಡೆಯಲಿದ್ದು, ಎಲ್ಲಾ ಸಿದ್ದತೆಗಳು ಭರದಿಂದ ಸಾಗಿದೆ. ನೂತನ ಕಚೇರಿಯಲ್ಲಿ ಪೂಜಾ ವಿಧಿ ವಿಧಾನಗಳು ಬಹಳ ಅಚ್ಚುಕಟ್ಟಾಗಿ ನಡೆಯುತ್ತಿದೆ. ಇಲ್ಲಿದೆ ನೋಡಿ ಪೂಜಾ ಕಾರ್ಯಕ್ರಮದ ಮಿನುಗು ನೋಟ.







