ಕಾರು ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿ ಕಾರು ಚಾಲಕ ಗಾಯಗೊಂಡಿರುವ ಘಟನೆ
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಗುಂಡ್ಯದಲ್ಲಿ ನಡೆದಿದೆ. ಬೆಂಗಳೂರು ನಿವಾಸಿ, ಕಾರು ಚಾಲಕ ಸೂರ್ಯನಾಯಕ ಬಿ. (28ವ. )ಗಾಯಗೊಂಡವರಾಗಿದ್ದಾರೆ. ಇವರು ಕಾರಿನಲ್ಲಿ (ಕೆಎ 05, ಎಂಝಡ್ 8404) ಸ್ನೇಹಿತರಾದ ರೋಹಿತ್, ಪವನ್ ಮತ್ತು ತಿರಮಲೇಶ್ವರ ಎಂಬವರ ಜೊತೆಗೆ ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದಾಗ ಶಿರಾಡಿ ಗ್ರಾಮದ ಗುಂಡ್ಯದಲ್ಲಿ ಲಾರಿ ಡಿಕ್ಕಿಯಾಗಿದೆ.




