ಜನ ಮನದ ನಾಡಿ ಮಿಡಿತ

Advertisement

ಚಂದ್ರಯಾನ- 3 ಉಡಾವಣೆಯ ಕೌಂಟ್​ಡೌನ್ ಹಿಂದಿನ ಧ್ವನಿಯಾಗಿದ್ದ ಇಸ್ರೋ ವಿಜ್ಞಾನಿ ವಲರ್ಮತಿ ನಿಧನ

ವಿಜ್ಞಾನಿ ವಲಮರ್ತಿ ಚಂದ್ರಯಾನ -3ರ ಉಡಾವಣೆಯ ದ್ವನಿಯಾಗಿದ್ದರು. ಹೃದಯಾ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ವಲಮರ್ತಿ ಅವರು ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ತಮ್ಮ ಕೊನೆಯ ದಿನಗಳಲ್ಲಿ ಚಂದ್ರಯಾನ 3 ಯಶಸ್ಸಿನಲ್ಲಿ ಭಾಗಿಯಾಗಿದ್ದರು. ರಾಕೆಟ್ ಲಾಂಚಿಂಗ್ ಸಂದರ್ಭದಲ್ಲಿ ಇವರು ನೀಡುವ ಕೌಂಟ್ ಡೌನ್ ಬಹಳ ಪ್ರಾಮುಖ್ಯದ್ದಾಗಿದೆ.

ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಇಸ್ರೋದ ಮಾಜಿ ನಿರ್ದೇಶಕ ಡಾ.ಪಿ.ವಿ.ವೆಂಕಟಕೃಷ್ಣನ್, “ಶ್ರೀಹರಿಕೋಟಾದಿಂದ ಇಸ್ರೋದ ಭವಿಷ್ಯದ ಕಾರ್ಯಾಚರಣೆಗಳ ಕ್ಷಣಗಣನೆಗಳಿಗೆ ವಲರ್ಮತಿ ಮೇಡಂ ಅವರ ಧ್ವನಿ ಇರುವುದಿಲ್ಲ. ಚಂದ್ರಯಾನ -3 ಅವರ ಅಂತಿಮ ಕ್ಷಣಗಣನೆ ಪ್ರಕಟಣೆಯಾಗಿತ್ತು. ಅನಿರೀಕ್ಷಿತ ಅಗಲಿಕೆಯಿಂದ ದುಃಖವಾಗುತ್ತಿದೆ. ಪ್ರಣಾಮಗಳು!” ಎಂದು ಟ್ವೀಟ್ ಮಾಡಿದ್ದಾರೆ.

ತಮಿಳುನಾಡಿನ ಅರಿಯಲೂರಿನಲ್ಲಿ ಜನಿಸಿದ ವಲಮರ್ತಿ ಅವರು 1984 ರಲ್ಲಿ ಇಸ್ರೋಗೆ ಸೇರಿದ್ದು, ಇನ್ಸಾಟ್ 2 ಎ, ಐಆರ್‌ಎಸ್ ಐಸಿ, ಐಆರ್‌ಎಸ್ ಐಡಿ, ಟಿಇಎಸ್ ಸೇರಿದಂತೆ ಅನೇಕ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 2011 ರಲ್ಲಿ ಜಿಸ್ಯಾಟ್ -12 ಮಿಷನ್ನ ಯೋಜನಾ ನಿರ್ದೇಶಕಿ ಟಿ.ಕೆ.ಅನುರಾಧಾ ನಂತರ ಪ್ರತಿಷ್ಠಿತ ಯೋಜನೆಯ ನೇತೃತ್ವ ವಹಿಸಿದ ಇಸ್ರೋದ ಎರಡನೇ ಮಹಿಳಾ ವಿಜ್ಞಾನಿಯಾಗಿದ್ದಾರೆ.ಅವರು ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ರಾಡಾರ್ ಇಮೇಜಿಂಗ್ ಉಪಗ್ರಹ ವಲರ್ಮತಿ – ರಿಸ್ಯಾಟ್ -1 ರ ಯೋಜನಾ ನಿರ್ದೇಶಕರಾಗಿದ್ದರು ಮತ್ತು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಗೌರವಾರ್ಥ 2015 ರಲ್ಲಿ ತಮಿಳುನಾಡು ಸರ್ಕಾರ ಸ್ಥಾಪಿಸಿದ ಅಬ್ದುಲ್ ಕಲಾಂ ಪ್ರಶಸ್ತಿಯನ್ನು ಪಡೆದ ಮೊದಲ ವ್ಯಕ್ತಿಯಾಗಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!