ಪಾಣೆಮಂಗಳೂರು ಪೇಟೆಯ ಮಧ್ಯ ಭಾಗದಲ್ಲಿ ಸರಕಾರಿ ಶಾಲೆಯೊಂದರ ಸನಿಹ ಸಾರ್ವಜನಿಕರ ಉಪಯೋಗಕ್ಕೆ ನಿರ್ಮಾಣ ಮಾಡಲಾಗಿದ್ದ ಸರಕಾರಿ ಬಾವಿಯ ಕಥೆ…

ಶಾಲೆ ಸಹಿತ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಭಾಗದ ಕೆಲವೊಂದು ಮನೆಗಳಿಗೆ ಕುಡಿಯುವ ನೀರನ್ನು ಒದಗಿಸುತ್ತಿದ್ದ ಸರಕಾರಿ ಬಾವಿ, ನಿರ್ವಹಣೆ ಇಲ್ಲದೆ ಮುಚ್ಚುವ ಸ್ಥಿತಿಗೆ ತಲುಪಿತ್ತು. ಮರಗಿಡಪೊದೆಗಳಿಂದ ಆವೃತ್ತವಾಗಿದಲ್ಲದೆ, ನೀರು ಕಲುಷಿತಗೊಳಿಸಲಾಗಿತ್ತು. ಪ್ರಸ್ತುತ ದಿನಗಳಲ್ಲಿ ಕುಡಿಯುವ ಉದ್ದೇಶಕ್ಕೆ ಬಾವಿಯ ನೀರು ಅಗತ್ಯವಿಲ್ಲದಿದ್ದರೂ , ಹಳೆಯ ಕಾಲದ ಸರಿಕಾರಿ ಬಾವಿಯನ್ನು ಉಳಿಸಬೇಕು,ಮುಂದಿನ ಪೀಳಿಗೆಗೆ ತಿಳಿಸಬೇಕು ಎಂಬ ಕನಸು ಇಲ್ಲಿನ ಸ್ಥಳೀಯರದ್ದು ಆಗಿತ್ತು.

ಹಾಗಾಗಿ ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರಿಸುವ ಕೆಲಸ ಮಾಡಲಾಯಿತು. ವರದಿಯನ್ನು ಗಮನಿಸಿದ ಪುರಸಭಾ ಇಲಾಖೆ ಕೂಡಲೇ ಕಾರ್ಯಪ್ರವೃತ್ತರಾಗಿದೆ. ವರದಿಗೆ ಸ್ಪಂದಿಸಿದೆ. ಇಲಾಖೆಯ ಪೌರಕಾರ್ಮಿಕರು ಇಂದು ಬಾವಿಯ ಸುತ್ತ ಶುಚಿತ್ವದ ಕಾರ್ಯದಲ್ಲಿ ತೊಡಗಿದೆ.. ಅಂತೂ ಕೊನೆಗೂ ಸರಕಾರಿ ಬಾವಿ ಎಂಬ ರೂಪವನ್ನು ಸದ್ಯ ನೀಡಿದ್ದಾರೆ.



