ಸನಾತನ ಧರ್ಮವನ್ನು ಡೆಂಘೀ ಮತ್ತು ಮಲೇರಿಯಾ ಕ್ಕೇ ಹೋಲಿಸಿ, ಅದನ್ನು ನಾಶ ಮಾಡುವಂತೆ ಬಹಿರಂಗ ಬೆದರಿಕೆ ಹಾಕಿದ ತಮಿಳುನಾಡು ಮುಖ್ಯಮಂತ್ರಿ ಯ ಮಗ ಮತ್ತು ಸಚಿವನಾದ ಉದಯ ನಿದಿ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಹಿಂದು ಜಾಗರಣ ವೇದಿಕೆಯ ತಾಲೂಕು ಸಂಯೋಜಕರಾದ ಹರೀಶ್ ತಲೆಂಬೀಲ ಪ್ರಕರಣ ದಾಖಲಿಸಿದರು. ಈ ಸಂದರ್ಬದಲ್ಲಿ ಜಿಲ್ಲಾ ನ್ಯಾಯ ಜಾಗರಣಾ ಪ್ರಮುಖ್ ವಕೀಲರಾದ ರಾಜೇಶ್ ಬೊಳ್ಳುಕಲ್ಲು, ಮಂಗಳೂರು ಮಹಾನಗರ ಮತ್ತು ಗ್ರಾಮಾಂತರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಕೆಂಪುಗುಡ್ಡೆ, ಬಾಲಕೃಷ್ಣ ಕಲಾಯಿ, ಶರಣ್ ಕಾಮಾಜೆ, ಸಂತೋಷ್ ಜೈನ್, ಬಾಲಕೃಷ್ಣ ಕಾಮಾಜೆ, ಸಂತೋಷ್ ಕಾಮಾಜೇ, ಪವನ್ ನಾವೂರ, ಸುಮಂತ್ ಕಾಮಾಜೆ ಉಪಸ್ಥಿತರಿದ್ದರು.




