ಬಂಟ್ವಾಳ : ಹಿಂದೂ ಸಮಾಜವನ್ನು ಕೆಣಕಿದರೆ ಸುಮ್ಮನಿರುವುದಿಲ್ಲ, ಹಿಂದೂ ಸಮಾಜದ ಮಹಾಪುರುಷರಿಗೆ ಅಪಮಾನ ಮಾಡಿದರೆ ಸಹಿಸಲು ಸಾಧ್ಯವಿಲ್ಲ ಎಂದು ಆರ್.ಎಸ್.ಎಸ್.ಪ್ರಮುಖರಾದ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಹೇಳಿದರು.
ಅವರು ಸ್ವಾತಂತ್ರ್ಯ ವೀರ ದಾಮೋದರ ಸಾವರ್ಕರ್ ಅವಮಾನವನ್ನು ಖಂಡಿಸಿ ವಿಶ್ವಹಿಂದೂಪರಿಷತ್ ಬಜರಂಗಳ ಮಂಚಿ ಘಟಕ ಮತ್ತು ಮಾತೃಶಕ್ತಿ,ದುರ್ಗವಾಹಿನಿ ಮಂಚಿ ಘಟಕದ ವತಿಯಿಂದ ಮಂಚಿ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ನಡೆದ ಹಿಂದೂ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.
ಹಿಂದೂ ಸಮಾಜ ಕ್ಷಣಕ್ಷಣವೂ ಎಚ್ಚರದಿಂದರಬೇಕು. ಲವ್ ಜಿಹಾದ್ ನಂತಹ ಮೋಸದ ಬಲೆಗೆ ಬೀಳಬಾರದು ಎಂದು ಅವರು ಎಚ್ಚರಿಸಿದರು.
ಮಹಿಳಾ ಪರ ಮಾತನಾಡುವ ರಾಜ್ಯದ ಕಾಂಗ್ರೆಸ್ ಸರಕಾರ ಮಂಚಿಯ ಶಾಲಾ ಶಿಕ್ಷಕಿಗೆ ಅನ್ಯಾಯವಾದಗ ಸೌಜನ್ಯಕ್ಕಾದರೂ ವಿಚಾರಿಸುವ ಕೆಲಸ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಇಲ್ಲಿ ಸೌಜನ್ಯಕ್ಕೆ ಬೆಲೆಯಿಲ್ಲದಂತಾಗಿದೆ. ಹಾಗಾಗಿ ಹನ್ನೊಂದು ವರ್ಷಗಳ ಹಿಂದೆ ಅತ್ಯಾಚಾರ ಮಾಡಿ ಕೊಲೆಯಾದ ಅಮಾಯಕ ಶಾಲಾ ಬಾಲಕಿ ಸೌಜನ್ಯ ನಿಗೆ ನ್ಯಾಯಸಿಕ್ಕಿಲ್ಲ ಎಂದು ಹೇಳಿದರು.
ಪದ್ಮಾಲತನಿಂದ ಹಿಡಿದು ಸೌಜನ್ಯ ವರೆಗೆ ನಡೆದ ಸಾಲುಸಾಲು ಕೊಲೆಗಳಿಗೆ ನ್ಯಾಯಸಿಗಬೇಕಾಗಿದೆ ಎಂದು ಅವರು ಒತ್ತಿ ಹೇಳಿದರು. ದೇಶದ್ಯಾಂತ ನಡೆಯುವ ಹೋರಾಟದ ಕಿಚ್ಚು ನೋಡಿದರೆ ಸೌಜನ್ಯ ಎಂಬ ಬಾಲಕಿ ದೇವಿ ರೂಪದಿಂದ ಬಂದಿದ್ದಾಳೆ ಅಂತ ಕಾಣುತ್ತದೆ ಎಂದು ಹೇಳಿದರು. ರಾತ್ರಿಯಿಡಿ ಹುಡುಕಿದರು ಸಿಗದ ಸೌಜನ್ಯನ ಮೃತದೇಹ ಮರುದಿನ ಅದೇ ಸ್ಥಳಕ್ಕೆ ಹೇಗೆ ಬಂತು ಎಂದು ಪ್ರಶ್ನಿಸಿದರು. ಸೌಜನ್ಯ ನಿಗೆ ನ್ಯಾಯ ಸಿಕ್ಕರೆ ಇಡೀ ಮಹಿಳೆಯರಿಗೆ ನ್ಯಾಯ ಸಿಕ್ಕಂತೆ ಎಂದು ಹೇಳಿದರು.
ದೇಶದಲ್ಲಿರುವ ಲಕ್ಷ ಲಕ್ಷ ಮಸೀದಿಗಳು , ಚರ್ಚ್ ಗಳು ಹಿಂದೂಗಳ ಪವಿತ್ರ ನೆಲದಲ್ಲಿದರುವುದು ಎಂಬುದನ್ನು ನೆನಪು ಮಾಡಬೇಕಾಗಿದೆ ಎಂದು ಹೇಳಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಬೈಕ್ ಚಲೋ ನಡೆಯಿತು. ಜೊತೆಗೆ ಪ್ರತಿ ಮನೆಗೆ ಸಾವರ್ಕರ್ ಪೋಟೋ ಮತ್ತು ಚರಿತ್ರೆ ಪುಸ್ತಕ ವನ್ನು ನೀಡಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಸೈನಿಕ ರಮೇಶ್ ರಾವ್ ನೂಜಿಪ್ಪಾಡಿ ವಹಿಸಿದ್ದರು.
ವೇದಿಕೆಯಲ್ಲಿ ವಿಶ್ವಹಿಂದೂ ಪರಿಷತ್ ಪ್ರಾಂತ ಸಹ ಸಂಚಾಲಕ ಶರಣ್ ಪಂಪ್ ವೆಲ್, ವಿಹಿಂಪ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಪುತ್ತೂರು,ಸಚಿನ್ ಮೆಲ್ಕಾರ್ ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಕಾಗುಡ್ಡೆ ಎಂಬಲ್ಲಿ ರಾತ್ರಿ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಮನೆಯ ಚಾವಣಿ…
ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕೊಳಕೆ ಎಂಬಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದಂತಹ ಅವಘಡದಲ್ಲಿ ಮನೆಯ ಪೀಠೋಪಕರಣಗಳು ಹಾಗೂ ದಿನನಿತ್ಯ…
ವಾಷಿಂಗ್ಟನ್ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಯು. ಟಿ. ಖಾದರ್ ಫರೀದ್ ಅವರ ಸಾರ್ವಜನಿಕ ಸೇವೆ…
ಫಿಫಾ ವಿಶ್ವಕಪ್ 2026ರ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯಗಳ ವೇಳೆ ನಡೆದ ಗಲಾಟೆ ಮತ್ತು ನಿಯಮ ಉಲ್ಲಂಘನೆಗಳ ಹಿನ್ನೆಲೆಯಲ್ಲಿ, ಅರ್ಜೆಂಟೀನಾ…
'ನ್ಯೂಯಾರ್ಕ್ ಟೈಮ್ಸ್' ತನ್ನ ವರದಿಯಲ್ಲಿ 'ಪಾಕಿಸ್ತಾನಿ ಕಾಶ್ಮೀರ' ಎಂದು ಉಲ್ಲೇಖಿಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಮೆರಿಕದಲ್ಲಿರುವ ಭಾರತೀಯ ರಾಯಭಾರ…
ಚೀನಾ ಪಾಕಿಸ್ತಾನದ ಮೂಲಕ ಇರಾನ್‌ಗೆ 400 ರಾಕೆಟ್ ಲಾಂಚರ್‌ಗಳನ್ನು ಪೂರೈಸಿದೆ ಎಂಬ ವರದಿಗಳು ಜಾಗತಿಕ ಆತಂಕಕ್ಕೆ ಕಾರಣವಾಗಿವೆ. ಈ ಕುರಿತು…