ಮಂಗಳೂರು; ಸಮುದ್ರ ವಿಹಾರಕ್ಕೆ ಬಂದ ವೈದ್ಯರೊಬ್ಬರು ಸಮುದ್ರಪಾಲಾದ ಘಟನೆ ತಡರಾತ್ರಿ ಉಳ್ಳಾಲದಲ್ಲಿ ನಡೆದಿದೆ.

ವೈದ್ಯರನ್ನು ಡಾ. ಆಶೀಕ್ ಗೌಡ (30) ಎಂದು ಗುರುತಿಸಲಾಗಿದ್ದು, ಸ್ನೇಹಿತನನ್ನು ರಕ್ಷಿಸಲು ಹೋಗಿ ಈ ಅವಗಢ ಸಂಭವಿಸಿದೆ.
ತಡರಾತ್ರಿ ಸಮುದ್ರ ವಿಹಾರಕ್ಕೆ ಬಂದಿದ್ದ ಐವರು ವೈದ್ಯರು, ಸೋಮೇಶ್ವರ ಬೀಚ್ ನ ರುದ್ರಪಾದೆ ಮೇಲೆರಿದ್ದಾರೆ. ಈ ವೇಳೆ ಡಾ.ಪ್ರದೀಪ್ ಎಂಬವರು ಬಂಡೆಯ ಮೇಲಿಂದ ಬಿದ್ದಿದ್ದು, ಕೆಳಗೆ ಬಂಡೆಯನ್ನ ಹಿಡಿದು ಸಹಾಯಕ್ಕೆಯಾಚಿಸಿದ್ರು.
ಪ್ರದೀಪ್ ರಕ್ಷಣೆಗೆ ಪ್ರಯತ್ನಿಸಿದ್ದ ಡಾ.ಆಶೀಕ್ ಗೌಡ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾರೆ. ಕಲ್ಲುಗಳ ಆಸರೆ ಪಡೆದು ಡಾ. ಪ್ರದೀಪ ಮೇಲೆ ಬಂದು, ಪೊಲೀಸರಿಗೆ ಘಟನೆಯ ಮಾಹಿತಿ ನೀಡಿದ್ದಾರೆ.
ಇಂದು ರುದ್ರಪಾದೆಯ ಸಮೀಪದಲ್ಲೇ ಆಶೀಕ್ ಮೃತ ದೇಹ ಪತ್ತೆಯಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು



