ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ನಟರಾಜ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ಸೇವೆ ಪಡೆದ ಪ್ರಕರಣದಲ್ಲಿ ಕೋರ್ಟ್ ಶಶಿಕಲಾ ನಟರಾಜ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ. 2017ರಲ್ಲಿ ಶಶಿಕಲಾ ನಟರಾಜ್ ಅವರು ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದರು. 2017ರಿಂದ 2021 ಜನವರಿವರೆಗೂ ಶಶಿಕಲಾ ನಟರಾಜ್ ಸೆರೆವಾಸ ಅನುಭವಿಸಿದ್ದರು. ಈ ವೇಳೆ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಐಷಾರಾಮಿ ಸೇವೆ ಪಡೆದ ಆರೋಪವನ್ನು ಎದುರಿಸುತ್ತಿದ್ದಾರೆ.
ಸೆಂಟ್ರಲ್ ಜೈಲಿನಲ್ಲಿ ಶಶಿಕಲಾ ನಟರಾಜ್ ಅವರು ಐಷಾರಾಮಿ ಸೇವೆ ಪಡೆದ ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು. ಈ ಬಗ್ಗೆ ತನಿಖೆ ಮಾಡಲಾಗಿದ್ದು ಲೋಕಾಯುಕ್ತ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಇತ್ತೀಚೆಗೆ ಹೈಕೋರ್ಟ್ ಜೈಲಿನ ಸಿಬ್ಬಂದಿ ವಿರುದ್ಧದ ಆರೋಪವನ್ನು ರದ್ದು ಮಾಡಿತ್ತು. ಅದರಂತೆ ತಮ್ಮ ವಿರುದ್ಧದ ಕೇಸ್ ರದ್ದುಗೊಳಿಸುವಂತೆ ಶಶಿಕಲಾ ನಟರಾಜ್ ಅವರು ಕೋರಿದ್ದಾರೆ. ನಿನ್ನೆ ವಿಚಾರಣೆಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಶಶಿಕಲಾ ನಟರಾಜ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ಶಶಿಕಲಾ ಅವರ ಜೊತೆಗೆ ಅವರಿಗೆ ಶ್ಯೂರಿಟಿ ನೀಡಿದ್ದವರಿಗೂ ನೊಟೀಸ್ ಜಾರಿಯಾಗಿದೆ.



