ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಚಿತ್ರ ನಟ ಅನಂತ್ ನಾಗ್ ಭೇಟಿ ನೀಡಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ದೇವಳದ ವತಿಯಿಂದ ಅನಂತ್ ನಾಗ್ ಅವರಿಗೆ ದೇವರ ಶೇಷ ವಸ್ರ್ರ ಹಾಗೂ ಪ್ರಸಾದ ನೀಡಲಾಯಿತು. ಬಳಿಕ ಮಾದ್ಯಮದೊಂದಿಗೆ ಮಾತನಾಡಿದ ನಟ ಅನಂತ್ ನಾಗ್ ಮಂಗಳೂರಿನಲ್ಲಿ ಅತ್ಮೀಯರು ಸೇರಿ ನನ್ನ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ, ಇದು ನನಗೆ ತುಂಬಾನೇ ಖಷಿ ಕೊಟ್ಟಿದೆ, ತುಳು ಚಿತ್ರರಂಗ ತುಂಬಾ ಬೆಳವಣಿಗೆ ಕಂಡಿದೆ ಇನ್ನಷ್ಟು ಬೆಳೆಯಲಿ ಎಂದು ಶುಭಹಾರೈಸಿದ್ರು. ಇನ್ನೂ ಈ ಸಂದರ್ಭದಲ್ಲಿ ಅನಂತ್ ನಾಗ್ ಪತ್ನಿ, ಮಗಳು, ಅಳಿಯ, ಉದ್ಯಮಿ ನರೇಶ್ ಶಣೈ, ಗಿರಿಧರ್ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿರಿದ್ದರು.



