ಮೂಡಬಿದಿರೆ: ರಾಜ್ಯ ಸರ್ಕಾರ ಅನುದಾನ ಬಿಡುಗಡೆಯಾದ ಕೂಡಲೇ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳ ನಡೆಯಲಿದ್ದು, ಗಾಂಧಿನಗರದಲ್ಲಿ ಹೊಸ ಪಾರ್ಕ್ ನಿರ್ಮಾಣವಾಗುತ್ತಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.

ಇವರು 2020-21ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿ ಹಾಗೂ 2022-23ನೇ ಸಾಲಿನ ಪುರಸಭೆ ನಿಧಿಯಡಿ ನಿರ್ಮಾಣಗೊಂಡ ಗಾಂಧಿನಗರ ಅಂಗನವಾಡಿ ಕೇಂದ್ರದ ನೂತನ ಕೊಠಡಿಯನ್ನು ಉದ್ಘಾಟಿಸಿ ಮಾತಾನಾಡಿದ ಇವರು ಬಂಟ್ವಾಳದಿಂದ ಪೇಪರ್‌ಮಿಲ್ಲ್ ಮಾರ್ಗವಾಗಿ ಬರುವವರಿಗೆ ನೇರವಾಗಿ ಮಂಗಳೂರಿಗೆ ಹೋಗಲು ಮಾಸ್ತಿಕಟ್ಟೆ, ಗಾಂಧಿನಗರ ಮಾರ್ಗವಾಗಿ ರಿಂಗ್‌ರೋಡ್ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಮೂಡುಬಿದಿರೆ ನಗರದಲ್ಲಿ ವಾಹನದಟ್ಟಣೆ ಕಡಿಮೆಯಾಗಲಿದೆ ಎಂದರು. ಈ ವೇಳೆ ಶಾಸಕ ಉಮಾನಾಥ ಕೋಟ್ಯಾನ್, ಗುತ್ತಿಗೆದಾರ ಎಂ.ಕಣ್ಣನ್, ಅಂಗನವಾಡಿ ಕೇಂದ್ರದ ಹಳೇ ವಿದ್ಯಾರ್ಥಿನಿ ಹಾಗೂ ಝೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ಸ್ಪರ್ಧಿಯಾದ ಚೈತನ್ಯ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಇನ್ನೂ ಈ ಸಂದರ್ಭದಲ್ಲಿ ವಾರ್ಡ್ ಸದಸ್ಯೆ ದಿವ್ಯಾ ಜಗದೀಶ್, ಪುರಸಭೆ ಸದಸ್ಯರಾದ ನವೀನ್ ಶೆಟ್ಟಿ, ನಾಗರಾಜ ಪೂಜಾರಿ, ಶ್ವೇತಾ ಪ್ರವೀಣ್, ಸುಜಾತ ಶಶಿಕಿರಣ, ಧನಲಕ್ಷ್ಮೀ ಮಾರೂರು, ಜಯಶ್ರೀ ಕೇಶವ್, ಸೌಮ್ಯ ಶೆಟ್ಟಿ, ಮುಖ್ಯಾಧಿಕಾರಿ ಶಿವಾ ನಾಯ್ಕ್, ಇಂಜಿನಿಯರ್ ನಳಿನ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



