ಮಂಗಳೂರು: ಯಕ್ಷಗಾನ ವಿಶ್ವಮಾನ್ಯತೆಯನ್ನು ಪಡೆಯಬೇಕೆಂಬುದು ನಮ್ಮೆಲ್ಲ ಕರಾವಳಿಗರ ಆಶಯ. ಭಾರತದ ಸಂಸ್ಕೃತಿ ಸಂಸ್ಕಾರವನ್ನು ಬಿಂಬಿಸುವಂತಹ ಕೇಂದ್ರ ಘಟ್ಟ ಎಂದರೆ ಅದು ಲಂಡನ್‌ನಲ್ಲಿರುವ ನೆಹರೂ ಸೆಂಟರ್ ಎಂದು ಪಟ್ಲ ಫೌಂಡೇಶನ್‌ನ ಸ್ಥಾಪಕಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದ್ದಾರೆ.
ಇವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾನಾಡಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಸೆಪ್ಟೆಂಬರ್ 9 ರಿಂದ 17ರವರೆಗೆ ಯುರೋಪ್ – ಯಕ್ಷಗಾನ ಅಭಿಯಾನ ನಡೆಯಲಿದೆ. ಈಗಾಗಲೇ ಬೇರೆ ಬೇರೆ ದೇಶಗಳಲ್ಲಿ ಯಕ್ಷಗಾನವನ್ನು ಪಸರಿಸುವ ಕಾರ್ಯ ಮಾಡಿದ್ದೇವೆ. ಯಕ್ಷಗಾನ ಅಭಿಯಾನದಲ್ಲಿ ತೆಂಕುತಿಟ್ಟಿನ ರಾಜ ವೇಷ, ಬಣ್ಣದ ವೇಷ, ಪಗಡಿ ವೇಷ, ಸ್ತ್ರೀ ವೇಷ, ಹಾಸ್ಯ ವೇಷಗಳು ರಾರಾಜಿಸಲಿದ್ದು, ಯುರೋಪ್ ದೇಶದ ಬೇರೆ ಬೇರೆ ಭಾಗಗಳಲ್ಲಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಸೆಪ್ಟೆಂಬರ್ 9 ರಂದು ಜರ್ಮನಿಯ ಪ್ರಾಂಕ್ ಫುಟ್ 9, ಸೆ. 11 ರಂದು ಯುಕೆಯ ಮಿಲ್ಟನ್ ಕೇಯ್ನ್ಸ್, ಸೆ. 12 ರಂದು ಯುಕೆಯ ಬಾಸಿಲ್ಡನ್, ಸೆ.13 ರಂದು ಸೆಂಟ್ರಲ್ ಲಂಡನ್, ಯುಕೆ (ವಿಶ್ವ ಪ್ರಸಿದ್ಧ ನೆಹರೂ ಸೆಂಟರ್), 14 ರಂದು ಸ್ಲೋಗ್, ಸೆ.16 ರಂದು ಫ್ರಾನ್ಸ್ ನ ಪ್ಯಾರಿಸ್, ಸೆ.17 ರಂದು ಸ್ವಿಝರ್ ಲ್ಯಾಂಡ್ ನ ಝುರಿಚ್ ನಲ್ಲಿ ಯಕ್ಷಗಾನ ಭರ್ಜರಿ ಪದರ್ಶನಗೊಳ್ಳಲಿದೆ.
ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿ ಕಾರ್ಯಾಚರಣೆ ನಡೆಸಿ ಅರಬ್ಬಿ ಸಮುದ್ರದಲ್ಲಿ…
ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನಲ್ಲಿ ಇಂದು ಮಧ್ಯಾಹ್ನ ಕೋಕರ್ ಹೈಡ್ರೋ ಟ್ರೀಟರ್ ಘಟಕದಲ್ಲಿ ಘಟನೆ ಸಂಭವಿಸಿದ್ದು, ಘಟನಾ…
ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲು ಪ್ರದೇಶವನ್ನು ಅ.1ರ ಮಧ್ಯರಾತ್ರಿಯಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ವಿಭಾಗೀಯ…
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಲೆಗಳ ಆರಂಭದ ಸಮಯದಲ್ಲಿ ಬದಲಾವಣೆ…
ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ ಏಕ ಜಾತಿ ಧರ್ಮ ಪೀಠದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಪಂಚಾಶತ್…
ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗೆ ಅವಧಿ ಮೀರಿದ ಮಾತ್ರೆಗಳನ್ನು ವಿತರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಆಸ್ಪತ್ರೆ ಆಡಳಿತ…