ಮುಲ್ಕಿ: ನೆಹರು ಯುವ ಕೇಂದ್ರ ಮಂಗಳೂರು ,ರಜತ ಮಹೋತ್ಸವ ಸಮಿತಿ ಮಹಿಳಾ ಮಂಡಲ (ರಿ.) ತೋಕೂರು , ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಯುವಕ ಸಂಘ (ರಿ.) ತೋಕೂರು, ರೋಟರಿ ಸಮುದಾಯದಳ ತೋಕೂರು ಇವರ ಸಂಯುಕ್ತ ಆಶ್ರಯದಲ್ಲಿ ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಕ್ಕಳಿಗೆ ಕೃಷ್ಣವೇಷ ಸ್ಪರ್ಧೆ ಹಾಗೂ ಮೂಲ್ಕಿ ತಾಲೂಕು ಮಟ್ಟದ ಮಹಿಳಾ ಮಂಡಲದ ಸದಸ್ಯರಿಗೆ ಛದ್ಮವೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ವಿಜಯಲಕ್ಷ್ಮಿ ಆಚಾರ್ಯ ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಕೃಷ್ಣ ತನ್ನ ಜೀವನದುದ್ದಕ್ಕೂ ಯುವಜನತೆಯನ್ನು ಒಗ್ಗೂಡಿಸಿ ಕೊಂಡು ಹೇಗೆ ಧರ್ಮವನ್ನು ಉಳಿಸಿದ ಹಾಗೂ ಹೇಗೆ ಮಹಿಳೆಯರಿಗೆ ತನ್ನ ಜೀವನದಲ್ಲಿ ಮಹತ್ವವನ್ನು ನೀಡಿದ್ದ ಎಂಬುದನ್ನು ನಾವು ತಿಳಿದುಕೊಂಡು ಶ್ರೀಕೃಷ್ಣನ ಜೀವನ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ ದೀಪ್ತಿ ಭಟ್ ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು. ಸ್ಪರ್ಧೆಯ ತೀರ್ಪುಗಾರರಾಗಿ ಆಗಮಿಸಿದ ಖ್ಯಾತ ಲೇಖಕಿ ಶಕುಂತಲಾ ಭಟ್ ಮತ್ತು ಖ್ಯಾತ ರಂಗಭೂಮಿ ಕಲಾವಿದ, ನಿರ್ದೇಶಕ ಜನಾರ್ಧನ ಪಡುಪಣಂಬೂರು ಇವರು ಸ್ಪರ್ಧೆಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪಡುಪಣಂಬೂರು ಗ್ರಾಮ ಪಂಚಾಯತ್ ಗೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಹೇಮನಾಥ ಅಮೀನ್ ಇವರನ್ನು ಅಭಿನಂದಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರೋತ್ಸಾಹಕ ಬಹುಮಾನ ನೀಡಲಾಯಿತು ಕಾರ್ಯಕ್ರಮವನ್ನು ವಿನೋದಾ ಭಟ್ ನಿರೂಪಿಸಿದರು. ಅನುಪಮಾ ಎ ರಾವ್ ಸ್ವಾಗತಿಸಿ, ಶೇಖರ್ ಶೆಟ್ಟಿಗಾರ್ ಇವರು ವಂದನಾರ್ಪಣೆಗೈದರು.
ಮುದ್ದುಕೃಷ್ಣ ಸ್ಪರ್ಧಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನ ಬಿಂದು, ದ್ವಿತೀಯ ಸ್ಥಾನವನ್ನಆದ್ಯ, ತೃತೀಯ ಸ್ಥಾನವನ್ನ ಸುಖಿ ಪಡೆದುಕೊಂಡರು.
ಬಾಲಕೃಷ್ಣ ಸ್ಪರ್ಧಾ ವಿಭಾಗ ದಲ್ಲಿ ಪ್ರಥಮ ಸ್ಥಾನವನ್ನ ದಿಯಾ ಶೆಟ್ಟಿ, ದ್ವಿತೀಯ ಸ್ಥಾನವನ್ನಉಜ್ವಲಿತ, ತೃತೀಯ ಸ್ಥಾನವನ್ನ ಮಿತಾಂಶ್ ಪಡೆದುಕೊಂಡರು. ಇನ್ನು ಮಹಿಳೆಯರ ಛದ್ಮ ವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನ ಎಂ.ಜಿ .ಗೀತಾ (ಶ್ರೀ ದುರ್ಗಾ ಶಕ್ತಿ ಮಹಿಳಾ ಮಂಡಲ ಕೆರೆಕಾಡು), ದ್ವಿತೀಯ ಸ್ಥಾನವನ್ನ ಪ್ರಿಯಾ (ನವಜ್ಯೋತಿ ಮಹಿಳಾ ಮಂಡಲ ಕೊಯಿಕುಡೆ), ತೃತೀಯ ಸ್ಥಾನವನ್ನ ರಾಧಾ (ಮಹಿಳಾ ಮಂಡಲ (ರಿ.) ಹಳೆಯಂಗಡಿ) ಮುಡಿಗೇರಿಸಿಕೊಂಡರು.
ಬಂಟ್ವಾಳ ಆಡಳಿತ ಸೌಧದ ಕಚೇರಿಯಲ್ಲಿ ಸಾರ್ವಜನಿಕ ಉಪಯೋಗಕ್ಕೆ ಅಳವಡಿಸಲಾಗಿರುವ ಲಿಪ್ಟ್ನೊಳಗೆ ಇಬ್ಬರು ವ್ಯಕ್ತಿಗಳು ಸುಮಾರು 45 ನಿಮಿಷಗಳ ಕಾಲ ಸಿಲುಕಿಕೊಂಡು…
ಶಾಲೆಗಳು ವಿದ್ಯಾರ್ಥಿ ಸ್ನೇಹಿಯಾಗಿರಬೇಕು, ಮಕ್ಕಳು ಸಂಭ್ರಮದಿಂದ ಕಲಿಕೆಯಲ್ಲಿ ತೊಡಗಬೇಕೆನ್ನುವ ಮಹತ್ವಕಾಂಕ್ಷೆ ಎಲ್ಲರಲ್ಲೂ ಇದೆ. ಬೇಸಿಗೆ ರಜೆಯ ಮಜಾವನ್ನು ಕಳೆದು ಸಪ್ಪೆ…
ಟೈಲ್ಸ್ ಸಾಗಿಸುತ್ತಿದ್ದ ಪಾಜೆರೋ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಬ್ರಹ್ಮಾವರ ಸಮೀಪದ ಧರ್ಮಾವರಂ ಪೆಟ್ರೋಲ್ ಬಂಕ್ ಬಳಿ ಸಂಭವಿಸಿದೆ.…
ತೆಂಗಿನ ಮರದಿಂದ ಬಿದ್ದ ತೆಂಗಿನಕಾಯಿ ತಲೆಗೆ ಬಡಿದ ಪರಿಣಾಮ ಒಂದೂವರೆ ವರ್ಷದ ಗಂಡು ಮಗು ಮೃತಪಟ್ಟ ದಾರುಣ ಘಟನೆ ಬ್ರಹ್ಮಾವರ…
ನೆರೆಮನೆಯ ದನಗಳು ತನ್ನ ತೋಟಕ್ಕೆ ಬಂದು ಹಾನಿಗೊಳಿಸಿವೆ ಎಂಬ ಆಕ್ರೋಶದಿಂದ ಹಟ್ಟಿಯಲ್ಲಿ ಕಟ್ಟಿಹಾಕಿದ್ದ ದನಗಳಿಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿ…
ಮಂಗಳೂರಿನಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ…