ಮುಲ್ಕಿ: ಶ್ರೀ ಕೃಷ್ಣ ಯುವಕರ ಆದರ್ಶ ಪುರುಷನಾಗಿ, ದೀನರ ದೈವವಾಗಿ, ಪಂಡಿತರ ಪಾಲಿಗೆ ಜ್ಞಾನಿಯಾಗಿ ಕಂಡು ಬರುತ್ತಾನೆ.
ಮಹಾಭಾರತದುದ್ದಕ್ಕೂ ತಾನು ಜನಿಸಿದ್ದು ಧರ್ಮ ರಕ್ಷಣೆಗೆ ಅಂತಲೇ ಹೇಳುತ್ತಾ ಹೋಗುವ ಕೃಷ್ಣ, ಧರ್ಮ ರಕ್ಷಣೆಯ ಜೊತೆಗೆ ಅನೇಕ ಕಾರ್ಯಗಳನ್ನು ಕೂಡ ಮಾಡುತ್ತಾನೆ. ತುಂಟತನ, ಪ್ರೀತಿ, ಕರುಣೆ, ಗಡಸುತನ, ಹಠ, ಧರ್ಮ, ಜ್ಞಾನ – ಎಲ್ಲ ಮೇಳೈಸಿರುವ ಏಕೈಕ ವ್ಯಕ್ತಿತ್ವವೆಂದರೆ ಅದು ಭಗವಾನ್ ಶ್ರೀ ಕೃಷ್ಣ , ಇವರ ಜನ್ಮ ದಿನವನ್ನು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಅಭಿನಂದನೀಯ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಿರ್ ಇದರ ಸ್ಥಾಪಕ ಅಧ್ಯಕ್ಷ ಲ. ವೆಂಕಟೇಶ್ ಹೆಬ್ಬಾರ್ ಹೇಳಿದರು.
ಇವರು ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಾರದ ಸೊಸೈಟಿಯ ಅಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ವಹಿಸಿ, ಸಂಸ್ಕತಿಯನ್ನು ಮುಂದುವರೆಸಿಕೊಂಡು ಹೋಗುವಲ್ಲಿ ವಿಫಲವಾದರೇ, ಭಾರತದ ಸನಾತನ ನಾಗರಿಕತೆಗಳು ಕಣ್ಮರೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಹೀಗಾಗಿ ಚಿಕ್ಕಂದಿನಿಂದಲೇ ಮಕ್ಕಳಿಗೆ ಸಂಪ್ರದಾಯಗಳನ್ನು ಕಲಿಸಿಕೊಡುವಂತಹ ಕೆಲಸವಾಗಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಗೆ ಮುದ್ದು ಕೃಷ್ಣ ಮತ್ತು ಬಾಲ ಕೃಷ್ಣ ಸ್ಪರ್ಧೆ ಹಾಗೂ ವಿದ್ಯಾರ್ಥಿಗಳ ತಾಯಿಯಂದಿರಿಗೆ ಯಶೋದಾ ಕೃಷ್ಣ ಸ್ಪರ್ಧೆ ಆಯೋಜಿಸಲಾಗಿತ್ತು.
ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಯುಕೆಜಿಯ ಗೌತಮಿ ಪಿ ಕೋಟ್ಯನ್ ಪ್ರಥಮ ಹಾಗೂ ಯುಕೆಜಿಯ ಮೃದ್ವಿ ವಿ ಗುಜರನ್ ದ್ವಿತೀಯ.
ಬಾಲ ಕೃಷ್ಣ ಸ್ಫರ್ಧೆಯಲ್ಲಿ ಎರಡನೇ ತರಗತಿಯ ಮಂಗಳಶ್ರೀ ಪ್ರಥಮ ಹಾಗೂ ಎರಡನೇ ತರಗತಿಯ ಧ್ಯಾನ್ ಟಿ ಶೆಟ್ಟಿ ದ್ವಿತೀಯ.
ಯಶೋದಾ ಕೃಷ್ಣ ಸ್ಪರ್ಧೆಯಲ್ಲಿ ಒಂದನೇ ತರಗತಿಯ ಅನ್ವಿ ಡಿ ಶೆಟ್ಟಿ ಮತ್ತು ಅವರ ತಾಯಿ ದೀಪಿಕಾ ಶೆಟ್ಟಿ ಪ್ರಥಮ ಹಾಗೂ ಎರಡನೇ ತರಗತಿಯ ಮಂಗಳಶ್ರಿ ಮತ್ತು ಅವರ ತಾಯಿ ಐಶ್ವರ್ಯ ದ್ವಿತೀಯ ಬಹುಮಾನ ಗಳಿಸಿದರು.
ಈ ಕಾರ್ಯಕ್ರದಲ್ಲಿ ಶ್ರೀ ಶಾರದ ಸೊಸೈಟಿಯ ಕಾರ್ಯದರ್ಶಿ ಪುರಂದರ ಶೆಟ್ಟಿಗಾರ್, ಕೋಶಾಧಿಕಾರಿ ಭುವನಾಭಿರಾಮ ಉಡುಪ, ನಿರ್ದೇಶಕರುಗಳಾದ ಪಟೇಲ್ ವಾಸುದೇವ ರಾವ್, ಸುರೇಶ್ ರಾವ್ ಪಿ ಎಸ್, ಶಾಲಾ ಸಂಚಾಲಕ ದೇವಪ್ರಸಾದ್ ಪುನರೂರು ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಜಿತೇಂದ್ರ ವಿ ರಾವ್ ಸ್ವಾಗತಿಸಿ, ಸಹ ಶಿಕ್ಷಕಿ ದೀಕ್ಷಿತ ವಂದಿಸಿದರು, ಸಂದ್ಯಾ ನಿರೂಪಿಸಿದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…