ಕುಂದಾಪುರ; ಬೆಂಗಳೂರು ಮೈಸೂರು ಮಂಗಳೂರಿಗೆ ಬರುತಿದ್ದ ಗಾಡಿ ಸಂಖ್ಯೆ 16585 ಎಕ್ಸ್‌ಪ್ರೆಸ್ ರೈಲನ್ನು ಮುರುಡೇಶ್ವರದವರೆಗೆ ವಿಸ್ತರಿಸುವಂತೆ ಭಾರತೀಯ ರೈಲ್ವೇ ಇಲಾಖೆ ಆದೇಶ ಹೊರಡಿಸಿದೆ.
ಈ ಆದೇಶದಿಂದಾಗಿ ಕುಂದಾಪುರ ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕಕ್ಕೆ ರಾಜದಾನಿ ಬೆಂಗಳೂರು ಹಾಗೂ ಮೈಸೂರಿಗೆ ನಿತ್ಯ ರೈಲೊಂದು ಸಿಕ್ಕಂತಾಗಿದೆ. ಕೆಲ ವರ್ಷದಿಂದ ಸತತವಾಗಿ ಈ ಹೋರಾಟ ಕೈಗೆತ್ತಿಕೊಂಡಿದ್ದ ಕುಂದಾಪುರ ರೈಲ್ವೇ ಸಮಿತಿ, ದೆಹಲಿ ಮಟ್ಟದಲ್ಲಿ ನಿರಂತರ ಕೆಲಸ ಮಾಡಿದ್ದ ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ಲಭಿಸಿದೆ.
ಈಗಿರುವ ಕರಾವಳಿಯ ಜೀವನಾಡಿ ಪಂಚಗಂಗಾ ಎಕ್ಸ್‌ಪ್ರೆಸ್ ಬೆಂಗಳೂರಿನಿಂದ ಬೇಗನೆ ಹೊರಡುತ್ತದೆ ಹಾಗೂ ಅದರಲ್ಲಿ ಟಿಕೇಟು ಸಿಗುವುದಿಲ್ಲ ಎಂಬ ದೂರುಗಳಿಗೆ ಈಗ ಪರಿಹಾರ ಸಿಕ್ಕಂತಾಗಿದ್ದು, ಬೈಯಪ್ಪನ ಹಳ್ಳಿಯಿಂದ ಹೊರಟು ರಾತ್ರಿ ಒಂಬತ್ತು ಘಂಟೆಗೆ ಮೆಜೆಸ್ಟಿಕ್ ಬರುವ ರೈಲು ಮೈಸೂರು ಮಾರ್ಗವಾಗಿ ಮಂಗಳೂರು ಉಡುಪಿ ಕುಂದಾಪುರ ಮೂಲಕ ಸಂಚರಿಸಲಿದೆ.
ಮದ್ಯಾಹ್ನ ಮೂರುವರೆ ಸುಮಾರಿಗೆ ಕರಾವಳಿಯಿಂದ ಹೊರಡುವ ರೈಲು ಬೆಳಿಗ್ಗೆ ಆರಕ್ಕೆ ಬೆಂಗಳೂರು ತಲುಪಲಿದೆ. ವಾರಕ್ಕೆ ಮೂರು ದಿನ ಮಂಗಳೂರಿನವರೆಗೆ ಮಾತ್ರ ಓಡುತಿದ್ದ ಈ ರೈಲನ್ನು ಆರೂದಿನ ಓಡುವಂತೆ ಮಾಡಿ ಕುಂದಾಪುರ ಕಾರವಾರಕ್ಕೆ ವಿಸ್ತರಣೆ ಮಾಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಸತತವಾಗಿ ಪ್ರಯತ್ನಿಸಿದ್ದು , ಅವರ ಬೇಡಿಕೆಯಂತೆ ವಾರಕ್ಕೆ ಮೂರು ದಿನದ ಬದಲು ಆರು ದಿನ ಓಡುವಂತೆ ಭಾರತೀಯ ರೈಲ್ವೇ ಕಳೆದ ವರ್ಷವೇ ಆದೇಶ ಮಾಡಿತ್ತು .ಆದರೆ ರೈಲಿನ ಉಡುಪಿ ಕುಂದಾಪುರ ಕಾರವಾರ ವಿಸ್ತರಣೆ ಮಾತ್ರ ವಿಳಂಭವಾಗುತ್ತಲೇ ಇದ್ದ ಕಾರಣ ,ಕುಂದಾಪುರ ರೈಲ್ವೇ ಸಮಿತಿ ನಿರಂತರವಾಗಿ ಕೊಂಕಣ ರೈಲ್ವೆ, ದಕ್ಷಿಣ ರೈಲ್ವೇ ಹಾಗು ನೈರುತ್ಯ ರೈಲ್ವೇ ಜತೆ ಬೆಂಗಳೂರಿಗೆ ಹೆಚ್ಚುವರಿ ರೈಲು ಸೇವೆಯ ಹೋರಾಟ ನಡೆಸಿತ್ತು .
ಸಂಸದರ ಯತ್ನದಿಂದ ಎಲ್ಲಾ ಸಮಸ್ಯೆಗಳನ್ನೂ ಮೀರಿ ರೈಲ್ವೇ ಸಚಿವರ ಒಪ್ಪಿಗೆ ಪಡೆದುದಲ್ಲದೇ ರೈಲ್ವೇ ಅದಿಕಾರಿಗಳ ಸಭೆ ಕರೆದು ದಸರಾ ಒಳಗೆ ರೈಲು ಓಡಲೇ ಬೇಕೆಂದು ಕಟ್ಟು ನಿಟ್ಟಿನ ಸೂಚನೆ ರವಾನಿಸಿದ ಪರಿಣಾಮ ಇಲಾಖೆ ಈ ರೈಲಿನ ವಿಸ್ತರಣೆಗೆ ಆದೇಶ ನೀಡಿದೆ.
ಬಸ್‌ನಿಂದ ಇಳಿದು ರಸ್ತೆ ಬದಿಗೆ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕೂಲಿ ಕಾರ್ಮಿಕನೊಬ್ಬ ಸ್ಥಳದಲ್ಲೇ…
ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದ ಆರೋಪಿಗಳಿಬ್ಬರ ಮೃತದೇಹಗಳು ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಚಾರ್ಸಲ್ ಪ್ರದೇಶದ…
ಉಡುಪಿ ನಗರದ ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್‌ವೊಂದು ಕಳವಾಗಿರುವ ಘಟನೆ ಸೆ.29ರಂದು ಬೆಳಕಿಗೆ ಬಂದಿದ್ದು,…
ಮಂಗಳೂರು ವಿಶ್ವವಿದ್ಯಾನಿಲಯದ 16 ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು 2026-27ನೇ ಶೈಕ್ಷಣಿಕ ಸಾಲಿನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೋರ್ಸ್‌ಗಳನ್ನು ಮುಂದುವರಿಸಲು ಅಗತ್ಯವಿರುವಷ್ಟು ವಿದ್ಯಾರ್ಥಿಗಳು…
ಮಂಗಳೂರು ಮತ್ತು ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕ ಭಾಗದಲ್ಲಿ ಕರ್ನಾಟಕ ಹೈಕೋರ್ಟ್‌ನ ಸರ್ಕ್ಯೂಟ್ ಬೆಂಚ್ ಅಥವಾ ಶಾಶ್ವತ ಪೀಠ ಸ್ಥಾಪಿಸುವ…
ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಪ್ರಯಾಣಿಸುತ್ತಿದ್ದ ಕಾರಿಗೆ ಗೂಡ್ಸ್ ಆಟೋ ರಿಕ್ಷಾ ಡಿಕ್ಕಿಯಾಗಿ, ತೀವ್ರವಾಗಿ ಗಾಯಗೊಂಡಿದ್ದ ಆಟೋ…