ಪ್ರತಿನಿತ್ಯ ಪತಿ ಹಿಂಸೆ ನೀಡುತ್ತಿದ್ದ ಎಂಬ ಕಾರಣಕ್ಕೆ ಪತ್ನಿ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ತವರು ಮನೆ ಸೇರಿದ್ದಳು.

ಪತ್ನಿ ಇಲ್ಲದೆ ಕಂಗಾಲಾದ ಶೆಟ್ಟಿರಾಮ್, ಪಾಟ್ನಾಗೆ ಬಂದು ಪತ್ನಿಯನ್ನ ಕಳುಹಿಸುವಂತೆ ಕೋರಿದ್ದಾನೆ. ಆದ್ರೆ ಪತ್ನಿ ಮನೆಯವರು ಆತನೊಂದಿಗೆ ಮಗಳನ್ನ ಕಳುಹಿಸಲು ನಿರಾಕರಿಸಿದ್ದಾರೆ.
ಇದರಿಂದ ಕೋಪಗೊಂಡ ಶೆಟ್ಟಿ ರಾಮ್, ನೇರವಾಗಿ ಸ್ಮಶಾನದ ಚಿಮಣಿ ಏರಿದ್ದಾನೆ. ನನ್ನ ಪತ್ನಿಯನ್ನ ಕಳುಹಿಸದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತ ಬೆದರಿಕೆ ಹಾಕಿದ್ದಾನೆ. ಸುಮಾರು 4 ಗಂಟೆಗಳ ಕಾಲ ಚಿಮಣಿಯಲ್ಲಿ ಹುಚ್ಚಾಟ ಮೆರೆದಿದ್ದಾನೆ. ಬಳಿಕ ಇತನ ಹುಚ್ಚಾಟ ಕಂಡ ಪೊಲೀಸ್ ಅಧಿಕಾರಿಗಳು ಹೇಗೋ ಕೆಳಕ್ಕೆ ಇಳಿಸಿದ್ದಾರೆ. ಇನ್ನೂ ಶೆಟ್ಟಿ ರಾಮ್ ಚಿಮಣಿ ಏರಿರೋ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.



